ಯೋಜನೆಯ ಹೆಸರು | ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ |
ವೀಮಾ ಮೊತ್ತ | ಗರಿಷ್ಠ 2 ಲಕ್ಷದವರೆಗೆ |
ವಯಸ್ಸಿನ ಮಿತಿ | 18 ವರ್ಷದಿಂದ 70 ವರ್ಷ |
ಪ್ರಾರಂಭವಾದ ವರ್ಷ | 2015 |
Pradhan Mantri Suraksha Bima Yojana in Kannada – ಸುರಕ್ಷಾ ಭೀಮಾ ಯೋಜನೆ :
Pradhan Mantri Suraksha Bima Yojana in Kannada – ಸುರಕ್ಷಾ ಭೀಮಾ ಯೋಜನೆ : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ನಮ್ಮ ದೇಶದಲ್ಲಿ ಮನೆಯ ಹಿರಿಯ ಸದಸ್ಯರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತದೆ. ಕೆಲವು ಕುಟುಂಬದವರಿಗೆ ಯಾವುದೇ ಆರ್ಥಿಕ ಬೆಂಬಲ ಇರುವುದಿಲ್ಲ. ಆರ್ಥಿಕವಾಗಿ ಅವರ ಪರಿಸ್ಥಿತಿ ಸರಿ ಇರುವುದಿಲ್ಲ.
ಈ ಸಮಸ್ಯೆಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಈಗಾಗಲೇ ಹಲವಾರು ಮಂದಿಗೆ ಉಪಯೋಗ ಆಗಿದೆ. ಈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2015 ಮೇ 8ರಂದು ಜಾರಿಗೆ ತಂದರು. ಈ ಯೋಜನೆಯನ್ನು ಜಾರಿಗೆ ತಂದ ಮೂಲಕ ವಿವಿಧ ದುರ್ಬಲ ವರ್ಗಗಳ ಕುಟುಂಬಗಳ ಭವಿಷ್ಯಕ್ಕೆ ಸಹಾಯವಾಗಿದೆ. ಈ ಯೋಜನೆ ಯ ಮೂಲಕ ಹಲವಾರು ಕುಟುಂಬಗಳಿಗೆ ಅನುಕೂಲವಾಗಿದೆ.
ಈ ಯೋಜನೆಯನ್ನು ಪ್ರಾರಂಭ ಮಾಡುವುದು ಸುಲಭ ಕೇವಲ 12 ರೂಪಾಯಿಗಳನ್ನು ಠೇವಣಿ ಮಾಡಿ ಯೋಜನೆಯನ್ನು ಆರಂಭ ಮಾಡಬಹುದು. ವರ್ಷಕ್ಕೆ ಕೇವಲ ಒಂದು ಬಾರಿ ಠೇವಣಿ ಮಾಡಿ ಈ ಯೋಜನೆಗೆ ಸೇರಬಹುದು. ಈ ರೂಪಾಯಿಯನ್ನು ಬ್ಯಾಂಕುಗಳು ಆಟೋ ಡೆಬಿಟ್ ಮೂಲಕ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುತ್ತದೆ. ಈ ಯೋಜನೆಯ ಮೂಲಕ ಹಿರಿಯ ಸದಸ್ಯರು ರಸ್ತೆ ಅಪಘಾತ ಆದರೆ ಎರಡು ಲಕ್ಷದವರೆಗೆ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.
Atal pension scheme in Kannada – ಅಟಲ್ ಪಿಂಚಣಿ ಯೋಜನೆ
Pradhan Mantri Suraksha Bima Yojana in Kannada : ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಈ ಲೇಖನನ ಕೊನೆಯಲ್ಲಿ ಈ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕನ್ನು ನೀಡಿದ್ದೇವೆ. ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಇದರ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಬಳಿ ಮೊಬೈಲ್ ಅಥವಾ ಕಂಪ್ಯೂಟರ್ ಇದ್ದರೆ ಮನೆಯಲ್ಲಿಯೇ ಕೂತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಈ ಯೋಜನೆಗೆ ಸೇರಬಹುದು.
ಈ ಯೋಜನೆಯ ಅಡಿಯಲ್ಲಿ ವಿಮಾದಾರರು ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಪಘಾತದಿಂದ ಅಂಗವಿಕಲರಾದರೆ ಮಾತ್ರ ಇದರ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹೇಳುತ್ತೇವೆ ಆದರಿಂದ ಕೊನೆಯವರೆಗೆ ಈ ಲೇಖನವನ್ನು ಓದಿ. ಈ ಯೋಜನೆಗೆ ಬೇಕಾಗಿರುವ ಅಗತ್ಯ ದಾಖಲೆಗಳು ಅರ್ಹತೆಗಳು ಈ ಯೋಜನೆಯ ಉದ್ದೇಶಗಳು ಮುಂತಾದ ಮಾಹಿತಿಗಳನ್ನು ತಿಳಿಸುತ್ತೇವೆ.
ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ಉದ್ದೇಶಗಳು
ಪ್ರಧಾನಮಂತ್ರಿ ಸುರಕ್ಷಾ ಯೋಜನೆಯ ಜಾರಿಗೆ ತಂದಿರುವ ಮುಖ್ಯ ಉದ್ದೇಶ ಏನೆಂದರೆ ನಮ್ಮ ದೇಶದಲ್ಲಿ ಈಗಲೂ ಹಲವಾರು ಕುಟುಂಬಗಳು ಹಲವಾರು ಜನರು ದುರ್ಬಲ ವರ್ಗಕ್ಕೆ ಸೇರಿದ್ದಾರೆ. ಅಂತವರು ವಿಮಾ ಯೋಜನೆಗಳಿಗೆ ಸೇರಲು ಆರ್ಥಿಕವಾಗಿ ಸಬಲರಾಗಿಲ್ಲ. ಅಂತವರಿಗೆ ವಿಮಾ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಅಡಿಯಲ್ಲಿ ವಿಮಾದಾರರಿಗೆ ರಸ್ತೆ ಅಪಘಾತವಾದರೆ ಅಂಥವರಿಗೆ ಎರಡು ಲಕ್ಷದವರೆಗೆ ವಿಮಾ ನೀಡಲಾಗುತ್ತದೆ.
ರಸ್ತೆ ಅಪಘಾತದಲ್ಲಿ ಅಂಗವಿಕಲರಾದರೆ ಮುಂದಿನ ದಿನಗಳಲ್ಲಿ ಅವರಿಗೆ ಬದುಕಲು ತುಂಬಾ ಕಷ್ಟವಾಗುತ್ತದೆ. ಮುಂದೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. Pradhan Mantri Suraksha Bima Yojana in Kannada ಅವರ ಆರ್ಥಿಕ ಸ್ಥಿತಿಯು ದುರ್ಬಲವಾಗುತ್ತದೆ. ಆದ್ದರಿಂದ ಅವರಿಗೆ ಭದ್ರತೆಯನ್ನು ನೀಡಲು ಪ್ರಧಾನಮಂತ್ರಿ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಕೇವಲ ವರ್ಷಕ್ಕೆ 12 ರೂಪಾಯಿಗಳ ವಿಮಾ ಮೊತ್ತವನ್ನು ಪಾವತಿ ಮಾಡಿ ಈ ಯೋಜನೆಗೆ ಸೇರಬಹುದು.
ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ಪ್ರಯೋಜನಗಳು ಮತ್ತು ವೈಶಿಷ್ಟಗಳು :
ಅರ್ಜಿದಾರರ ಖಾತೆಯಿಂದ ಎರಡು ಬಾರಿ ಏನಾದರೂ ಶುಲ್ಕವು ಕಡಿತಗೊಂಡರೆ ಬ್ಯಾಂಕಿಗೆ ಹೋಗಿ ಶುಲ್ಕವನ್ನು ಪಡೆಯಬಹುದು. ಬ್ಯಾಂಕುಗಳು ಪ್ರತಿ ವರ್ಷ ಜೂನ್ ಒಂದರಂದು ಪಾಲಿಸಿಯನ್ನು ನವೀಕರಿಸುತ್ತದೆ. ನಾವು ಕಟ್ಟಬೇಕಾದ ವಿಮಾ ಮೊತ್ತವನ್ನು ಬ್ಯಾಂಕುಗಳು ಆಟೋ ಡಿಬಿಟ್ ಮೂಲಕ ಕಡಿತಗೊಳಿಸುತ್ತದೆ. ಈ ಯೋಜನೆಗೆ ಮೊದಲ ಬಾರಿ ಸೇರಲು ಬಯಸುವವರು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಅಥವಾ ಅಧಿಕೃತ ಅಪ್ಲಿಕೇಶನ್ ಗೆ ಭೇಟಿ ನೀಡಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಈ ಯೋಜನೆಯ ಲಾಭವನ್ನು ದೇಶದ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವವರು ಇದರ ಪ್ರಯೋಜನವನ್ನು ಪಡೆಯಬಹುದು.
ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಅರ್ಜಿ ಸಲ್ಲಿಸುವವರ ಹಣವು ಸೇರಿದಂತೆ ಅವರ ಸಮಯವೂ ಉಳಿತಾಯವಾಗುತ್ತದೆ. ಈ ಯೋಜನೆಗೆ ವರ್ಷಕ್ಕೆ ಕೇವಲ 12ರೂ ಅನ್ನು ಮಾತ್ರ ಪಾವತಿ ಮಾಡಲಿರುತ್ತದೆ. ಒಂದು ವೇಳೆ ಪಾಲಿಸಿದಾರರು ಆತ್ಮಹತ್ಯೆ ಮಾಡಿಕೊಂಡರೆ ಅವರಿಗೆ ಈ ಯೋಜನೆಯ ವಿಮಾ ರಕ್ಷಣೆ ಸಿಗುವುದಿಲ್ಲ ಗಮನದಲ್ಲಿಟ್ಟುಕೊಳ್ಳಿ. ಈ ಯೋಜನೆಯ ಪ್ರತಿ ವರ್ಷ ಜೂನ್ ಒಂದರಿಂದ ಮೇ 31ರವರೆಗೆ ಇರುತ್ತದೆ.
Pradhan Mantri Suraksha Bima Yojana in Kannada : ಪ್ರೀಮಿಯಂ ಪಡೆಯುವವರು ಬ್ಯಾಂಕಿಗೆ ಹೋಗಿ ಆಟೋ ಡೆಬಿಟ್ ಮಾಡಲು ಒಂದು ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ. ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯು ಲಿಂಕ್ ಆಗಿರಬೇಕು. ಈ ಯೋಜನೆಯಿಂದ ದೇಶದ ದುರ್ಬಲ ಜನರಿಗೆ ಮತ್ತು ಬಡವರಿಗೆ ಹೆಚ್ಚು ಪ್ರಯೋಜನವಾಗಲಿದೆ. ಪಾಲಿಸಿದಾರರು ಮರಣ ಹೊಂದಿದರೆ ಮರಣ ಹೊಂದಿದ 45 ದಿನಗಳ ನಂತರ ಕ್ಲೇಮ್ ಮಾಡಬಹುದಾಗಿದೆ. ಕ್ಲೇ ಮಾಡುವವರು ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನಾಮಿನಿಗೆ ಎರಡು ಲಕ್ಷದವರೆಗೆ ರಕ್ಷಣೆಯನ್ನು ನೀಡಲಾಗುತ್ತದೆ.
ಸುರಕ್ಷಾ ಭೀಮ ಯೋಜನೆಯ ಅರ್ಹತೆಗಳು :
- ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವು ಅರ್ಹತೆಗಳು ಬೇಕಾಗುತ್ತದೆ ಅವುಗಳ ಬಗ್ಗೆ ಕೆಳಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗಿದೆ ನೋಡಿ.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರ ಭಾರತದ ಕಾಯಂ ಪ್ರಜೆಯಾಗಿರಬೇಕು.
- ಅರ್ಜಿ ಸಲ್ಲಿಸುವವರ ಬಳಿ ಸ್ವಂತ ಉಳತಾಯ ಖಾತೆ ಇರಬೇಕು.
- ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷದಿಂದ 70 ವರ್ಷಗಳ ನಡುವೆ ಇರಬೇಕು.ಈ ವಯಸ್ಸಿನ ಮಿತಿಯಲ್ಲಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಮಾಹಿತಿ ಏನೆಂದರೆ, ಅರ್ಜಿ ಸಲ್ಲಿಸುವಾಗ ಸ್ವಯಂ ಡೇಬಿಟ್ ಆಯ್ಕೆಯನ್ನು ಟಿಕ್ ಮಾಡಬೇಕು. ಈ ಆಯ್ಕೆಯನ್ನು ಟಿಕ್ ಮಾಡಿದರೆ ಬ್ಯಾಂಕುಗಳು ಪ್ರತಿ ವರ್ಷ ಆಟೋ ಡೆಬಿಟ್ ಮೂಲಕ ವಿಮಾ ಮೊತ್ತವನ್ನು ಕಡಿತಗೊಳಿಸುತ್ತದೆ.
- ಆರ್ಜಿ ಸಲ್ಲಿಸುವವರ ಬಳಿ ಎಲ್ಲಾ ಅಗತ್ಯ ದಾಖಲೆಗಳಿರುವುದು ಮುಖ್ಯವಾಗಿದೆ ಎಲ್ಲಾ ಅಗತ್ಯ ದಾಖಲೆಗಳು ಇದ್ದರೆ ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಬೇಕಾಗಿರುವಾಗ ಅಗತ್ಯ ದಾಖಲೆಗಳ ಮಾಹಿತಿಗಳು ಈ ಕೆಳಗೆ ನೀಡಿದ್ದೇವೆ ನೋಡಿ.
ಬೇಕಾಗಿರುವಾಗ ಅಗತ್ಯ ದಾಖಲೆಗಳು : Pradhan Mantri Suraksha Bima Yojana in Kannada
- ಆಧಾರ್ ಕಾರ್ಡ್
- ಗುರುತಿನ ಚೀಟಿ ಅಥವಾ ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಸೈಜ್ ಫೋಟೋ
ಈ ಯೋಜನೆಗೆ ಸೇರುವವರು 70 ವರ್ಷ ತುಂಬುವವರೆಗೆ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಒಂದು ವೇಳೆ 20 ವರ್ಷ ಹೆಚ್ಚಾದರೆ ಈ ಯೋಜನೆಯನ್ನು ಅಲ್ಲಿಗೆ ಕೊನೆಗೊಳಿಸಲಾಗುತ್ತದೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಪಾಲಿಸಿಯ ಮೊತ್ತವನ್ನು ಪಾವತಿ ಮಾಡದಿದ್ದರೆ ಅಥವಾ ಆಟೋ ಡೆಬಿಟ್ ಮಾಡಲು ನಿಮ್ಮ ಖಾತೆಯಲ್ಲಿ ಹಣ ಇಲ್ಲವಾದರೆ ನಿಮ್ಮ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಖಾತೆಯನ್ನು ಕೊನೆಗೊಳಿಸಲಾಗುತ್ತದೆ.
ಅಭ್ಯರ್ಥಿಗಳಿಗೆ 55 ವರ್ಷ ತುಂಬಿದಾಗ ನಮ್ಮ ಖಾತೆಗಳನ್ನು ನವೀಕರಿಸದಿದ್ದರೆ ಅಂತವರ ಪಾಲಿಸಿಯು ಲ್ಯಾಪ್ಸ್ ಆಗುತ್ತದೆ. ಬ್ಯಾಂಕುಗಳು ಆಟೋ ಡೆಬಿಟ್ ಮಾಡುವ ಮುನ್ನ ಅಭ್ಯರ್ಥಿಗಳ ನೋಂದಾಯಿತ ಸಂಖ್ಯೆಗೆ ಎಸ್ಎಂಎಸ್ ಅನ್ನು ಮೊದಲೇ ಕಳಿಸುತ್ತದೆ. ಈ ಯೋಜನೆಗೆ ಯಾವುದೇ ರೀತಿಯ ವೈದಕೀಯ ಪರೀಕ್ಷೆಯ ಅಗತ್ಯ ಇರುವುದಿಲ್ಲ
ವಿಮೆ ಪಾಲಿಸಿಯನ್ನು ಕ್ಲೇಮ್ ಮಾಡುವುದು ಹೇಗೆ :
ಒಂದು ವೇಳೆ ವಿಮಾದಾರನು ಮರಣ ಹೊಂದಿದ್ದರೆ ನಂತರ ಪಾಲಿಸಿದಾರನ ನಾಮಿನಿಯಲ್ಲಿರುವ ಹೆಸರಿನ ವ್ಯಕ್ತಿಯು ಮೊದಲಿಗೆ ಬ್ಯಾಂಕಿಗೆ ಹೋಗಬೇಕು. ನಂತರ ಒಂದು ವಿಮಯ ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಅದೇ ಸ್ಥಳದಲ್ಲಿ ಪಾಲಿಸಿದಾರಣ ಮರಣ ಪ್ರಮಾಣ ಪತ್ರವನ್ನು ಕೂಡ ನೀಡಬೇಕು. ಅಂತರ ಕೆಲವು ದಿನಗಳಲ್ಲಿ ವಿಮ ಮೊತ್ತವನ್ನು ನಾಮಿನಿಯ ಖಾತೆಗೆ ವರ್ಗಾಯಿಸಲಾಗುತ್ತದೆ.
ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ? Pradhan Mantri Suraksha Bima Yojana in Kannada
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ನೋಡಿ ಮೊದಲಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಗೆ ಭೇಟಿ ನೀಡಬೇಕು.
- ಅಧಿಕೃತ ವೆಬ್ ಸೈಟ್ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಿದ್ದೇವೆ ಪರಿಶೀಲಿಸಿ ನಂತರ ಮುಖಪುಟಕ್ಕೆ ಭೇಟಿ ನೀಡಬೇಕು.
- ಮುಖಪುಟದಲ್ಲಿ ನೀವು ಅರ್ಜಿ ನಮೂನೆಗಳ ಆಯ್ಕೆಯನ್ನು ಕಾಣಬಹುದು.
- ನಿಮಗೆ ಅಲ್ಲಿ ಮೂರು ಆಯ್ಕೆಗಳು ಕಾಣುತ್ತದೆ ನೀವು ಪ್ರಧಾನಮಂತ್ರಿ ಸುರಕ್ಷಾ ಯೋಜನೆಯ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಹೊಸ ಪುಟ್ಟ ಓಪನ್ ಆಗುತ್ತದೆ ಆಗ ಕೆಲ ಆಯ್ಕೆಗಳು ನಿಮ್ಮ ಮುಂದೆ ಬರುತ್ತದೆ ಅವುಗಳಲ್ಲಿ ನೀವು ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ಅಗತ್ಯ ಭಾಷೆಗೆ ಅನುಗುಣವಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬೇಕು. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿದ ನಂತರ ಅರ್ಜಿ ನಮೂನೆಯ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬೇಕು.
- ಪ್ರಿಂಟ್ ಔಟ್ ತೆಗೆದುಕೊಂಡು ನಂತರ ನಿಮ್ಮ ಎಲ್ಲಾ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಅರ್ಜಿ ನಮೂನೆ ಜೊತೆ ಬೇಕಾಗಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ನಿಮ್ಮ ಹತ್ತಿರದ ಬ್ಯಾಂಕಿಗೆ ಸಲ್ಲಿಸಬೇಕು.
- ನೀವು ಯಾವ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ ಅದೇ ಬ್ಯಾಂಕಿನಲ್ಲಿ ಹೋಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ನಾಮಿನಿಯ ಮಾಹಿತಿಯನ್ನು ಕೇಳಲಾಗುತ್ತದೆ ಆದ್ದರಿಂದ ಎಚ್ಚರಿಕೆಯಿಂದ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು.
- ನಿಮಗೆ ಯಾವುದೇ ತೊಂದರೆ ಎದುರಿಸಿದ್ದಲ್ಲಿ ಅಥವಾ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ಈ ಯೋಜನೆಯ ಟೋಲ್ ಫ್ರೀ ಸಂಖ್ಯೆಗೆ ಫೋನ್ ಮಾಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
Conclusion :
Pradhan Mantri Suraksha Bima Yojana in Kannada – ಇಂದಿನ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳ ಬಹುದು. ಈ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಸುರಕ್ಷಾ ಯೋಜನೆಯ ಉದ್ದೇಶಗಳು, ಇದರ ಪ್ರಯೋಜನಗಳು ಮತ್ತು ಅರ್ಜಿ ಸಲ್ಲಿಸುವ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ನಮ್ಮ ವೆಬ್ಸೈಟ್ನಲ್ಲಿ ನಾವು ಈಗಾಗಲೇ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.
ಬೇರೆ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು. ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಕೆಟಗರಿ ಸೆಕ್ಷನ್ ಗೆ ಹೋಗಿ ಸರ್ಕಾರಿ ಸ್ಕೀಮ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಲೇಖನ ಓದಿದಕ್ಕಾಗಿ ಧನ್ಯವಾದಗಳು.