Join Whatsapp Group

Join Telegram Group

Union Bank recruitment – ಯೂನಿಯನ್ ಬ್ಯಾಂಕ್ ನೇಮಕಾತಿ

Union Bank recruitment – ಯೂನಿಯನ್ ಬ್ಯಾಂಕ್ ನೇಮಕಾತಿ

Union Bank recruitment – ಯೂನಿಯನ್ ಬ್ಯಾಂಕ್ ನೇಮಕಾತಿ ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಹೊಸ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಅಧಿಕೃತ ಸೂಚನೆಯ ಪ್ರಕಾರ ಭಾರತದ ವಿವಿಧ ಸ್ಥಳಗಳಲ್ಲಿ ಅಂದರೆ ಹರಿಯಾಣ, ಹೈದರಾಬಾದ್, ತೆಲಂಗಾಣ, ಬೆಂಗಳೂರು, ಮಂಗಳೂರು, ಮಧ್ಯಪ್ರದೇಶ, ಮುಂಬೈ, ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಹಲವುದ್ದೆಗಳಿಗೆ ನೇಮಕಾತಿಯನ್ನು ಆರಂಭ ಮಾಡಲಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಯುಎಲ್ಎ ಮುಖ್ಯಸ್ಥ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ಕೊನೆಯವರೆಗೆ ಓದಿ. ಅದಕ್ಕೂ ಮುನ್ನ ನೀವೇನಾದರೂ ನಮ್ಮ ವೆಬ್ಸೈಟ್ ಗೆ ಮೊದಲ ಬಾರಿ ಬರುತ್ತಿದ್ದಾರೆ ನಮ್ಮ ಜಾಯಿನ್ ಆಗಿ ಧನ್ಯವಾದಗಳು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಹುದ್ದೆಗಳ ವಿವರಗಳು

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭ ಮಾಡಿದೆ ಹುದ್ದೆಗಳ ವಿವರಗಳು ಈ ಕೆಳಗೆ ನೀಡಿದ್ದೇವೆ ನೋಡಿ – ಸಾಲ ಸಿಂಡಿಕೇಶನ ಕಾರ್ಪೊರೇಷನ್ ಸಂಬಂಧಪಟ್ಟ ಹುದ್ದೆಗಳು ಒಂದು, ವಹಿವಾಟು ಬ್ಯಾಂಕಿಂಗ್ ಮುಖ್ಯಸ್ಥ ಹುದ್ದೆಗಳು ಒಂದು, ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ ಹುದ್ದೆಗಳು ಒಂದು, ಕ್ರೆಡಿಟ್ ಕಾರ್ಡ್ ಮುಖ್ಯಸ್ಥ ಹುದ್ದೆಗಳು ಒಂದು, ಕಾಲ್ ಸೆಂಟರ್ ನಿರ್ವಹಣೆ ಮುಖ್ಯಸ್ಥ ಹುದ್ದೆಗಳು ಒಂದು, ಸಂಪತ್ತು ನಿರ್ವಹಣೆ ಮುಖ್ಯಸ್ಥ ಹುದ್ದೆಗಳು ಒಂದು, ಮಾರಾಟ ಮತ್ತು ಮಾರ್ಕೆಟ್ ಮುಖ್ಯಸ್ಥ ಹುದ್ದೆಗಳು ಒಂದು, ಶಿಕ್ಷಣ ತಜ್ಞ ಹುದ್ದೆಗಳು ನಾಲ್ಕು, ಉದ್ಯಮ ಸಲಹೆಗಾರ ಹುದ್ದೆಗಳು ಒಂಬತ್ತು. ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬಹುದು. ಅಧಿಕೃತ ಅಧಿಸೂಚನೆಯನ್ನು ಲೇಖನದ ಕೊನೆಯಲ್ಲಿ ನೀಡಿದ್ದೇವೆ.

ಯೂನಿಯನ್ ಬ್ಯಾಂಕ್ ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಯ ಮಾಹಿತಿಗಳು

ಯೂನಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಶಿಕ್ಷಣದ ಅರ್ಹತೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಎಂಬಿಎ ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ಪಿ ಎಚ್ ಡಿ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಈ ಮೇಲೆ ನೀಡಲಾದ ಶಿಕ್ಷಣವನ್ನು ಪೂರ್ಣ ಮಾಡಿದ ಅಭ್ಯರ್ಥಿಗಳು ಸಲ್ಲಿಸಬಹುದು.

ಯೂನಿಯನ್ ಬ್ಯಾಂಕ್ ನೇಮಕಾತಿಗೆ ಬೇಕಾಗಿರುವ ವಯಸ್ಸಿನ ಮಿತಿ ಮಾಹಿತಿಗಳು

ಸಂಸ್ಥೆ ಬಿಡುಗಡೆ ಮಾಡಿದ ಅಧಿಕೃತ ಸೂಚನೆಯ ಪ್ರಕಾರ ಯೂನಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 1 ದಿನಾಂಕದಂದು ಕನಿಷ್ಠ 28 ವರ್ಷ ಮತ್ತು ಗರಿಷ್ಠ 60 ವರ್ಷ ತುಂಬಿರಬೇಕು. ಈ ವಯಸ್ಸಿನ ಮಿತಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಲಾವಕಾಶವಿರುತ್ತದೆ. ಆದ್ದರಿಂದ ವಯಸ್ಸಿನ ಮಿತಿಯ ಮಾಹಿತಿಯನ್ನು ಸರಿಯಾಗಿ ನೋಡಿ ನಂತರವೇ ತಮ್ಮ ಅರ್ಜಿಗಳನ್ನು ಸಲ್ಲಿಸಿ.

ಸಾಲ ಸಿಂಡಿಕೇಶನ ಕಾರ್ಪೊರೇಟ್ ಸಂಬಂಧಪಟ್ಟ ಹುದ್ದೆಗಳ ವಯಸ್ಸಿನ ಮಿತಿ 35 ವರ್ಷದಿಂದ 55 ವರ್ಷಗಳು, ಬ್ಯಾಂಕಿಂಗ್ ಮುಖ್ಯಸ್ಥ ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ, ಕ್ರೆಡಿಟ್ ಕಾರ್ಡ್ ಮುಖ್ಯಸ್ಥ, ಕಾಲ್ ಸೆಂಟರ್ ನಿರ್ವಹಣೆ ಮುಖ್ಯಸ್ಥ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ವಯಸ್ಸಿನ ಮಿತಿ 30 ವರ್ಷದಿಂದ 60 ವರ್ಷಗಳು. ಇನ್ನು ಶಿಕ್ಷಣ ತಜ್ಞ ಉದ್ಯಮ ಸಲಹೆಗಾರ ಹುದ್ದೆಗಳಿಗೆ ಇರುವ ವಯಸ್ಸಿನ ಮಿತಿ 28 ವರ್ಷದಿಂದ 60 ವರ್ಷಗಳು.

KSFSLR recruitment – KSFSLR ನೇಮಕಾತಿ 2022

ನೇಮಕಾತಿಯ ಅರ್ಜಿ ಶುಲ್ಕದ ಮಾಹಿತಿಗಳು : 

ಸಂಸ್ಥೆ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯ ಪ್ರಕಾರ ವಿವಿಧ ಹುದ್ದೆಗಳಿಗೆ ವಿವಿಧ ರೀತಿಯ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಮೊದಲಿಗೆ ಸಾಮಾನ್ಯ ವರ್ಗ ಓಬಿಸಿ ಈಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಗರಿಷ್ಠ 750 ರೂಪಾಯಿಗಳ ಗರಿಷ್ಠ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಇನ್ನು ಉಳಿದ ಅಭ್ಯರ್ಥಿಗಳಿಗೆ ಅಂದರೆ ಎಸ್ಸಿ ಎಸ್ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಗರಿಷ್ಠ 150 ರೂಪಾಯಿಗಳ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಆನ್ಲೈನ್ ಮೂಲಕ ಪಾವತಿ ಮಾಡಬಹುದು. ಅರ್ಜಿ ಶುಲ್ಕದ ಹೆಚ್ಚಿನ ವಿವರವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಕೃತ ನೋಟಿಫಿಕೇಶನ್ ಅನ್ನು ಪರಿಶೀಲಿಸಿ. ಅಧಿಕೃತ ಅಧಿಸೂಚನೆಯನ್ನು ಕೊನೆಯಲ್ಲಿ ನೀಡಿದ್ದೇವೆ.

ನೇಮಕಾತಿಯ ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂಸ್ಥೆ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯ ಪ್ರಕಾರ ಮೊದಲಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಅಧಿಕೃತ ಅಧಿಸೂಚನೆಯ ಪ್ರಕಾರ ನೇಮಕಾತಿ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನ ಮಾಡಿ.

ಯೂನಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಕ್ರಮಗಳು :

  • ಈ ಮೇಲೆ ನೀಡಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ ಕೆಳಗೆ ನೀಡಿರುವ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ನಂತರ ವೆಬ್ಸೈಟ್ನಲ್ಲಿ ಹೊಸ ಅಧಿಸೂಚನೆಯ ಮಾಹಿತಿಯನ್ನು ಪಡೆಯಬಹುದು.
  • ನಂತರ ಅಧಿಕೃತ ಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣವಾಗಿ ಪ್ರಾರಂಭದಿಂದ ಕೊನೆಯವರೆಗೆ ಓದಿ.
  • ನೀವು ಹುದ್ದೆಗಳಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ನಂತರ ಮುಂದಿನ ಹಂತದಲ್ಲಿ ಯಾವುದೇ ತಪ್ಪುಗಳನ್ನು ಮಾಡದೆ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
  • ನಂತರ ಕೊನಯ ಹಂತದಲ್ಲಿ ಭವಿಷ್ಯತ್ತಿನ ನಿಮ್ಮ ಉಪಯೋಗಕ್ಕಾಗಿ ಅರ್ಜಿ ನಮೂನೆಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸರಿಯಾಗಿ ಪರಿಶೀಲಿಸಿ ನಂತರವೇ ತಮ್ಮ ಅರ್ಜಿಗಳನ್ನು ಸಲ್ಲಿಸುವುದು ಉತ್ತಮ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿಗಳು

ಯೂನಿಯನ್ ಬ್ಯಾಂಕ್ ಬಿಡುಗಡೆ ಮಾಡಿದ ಹೊಸ ಅಧಿಸೂಚನೆಯ ಪ್ರಕಾರ ಈ ಮೇಲೆ ನೀಡಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ ಡಿಸೆಂಬರ್ 7 ಆಗಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಮುಕ್ತಾಯ ಆಗುವ ದಿನಾಂಕ ಡಿಸೆಂಬರ್ 27 ಆಗಿರುತ್ತದೆ. ಈ ದಿನಾಂಕದ ಮುನ್ನ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

Conclusion :

ಈ ಲೇಖನದಲ್ಲಿ ನಾವು ಯೂನಿಯನ್ ಬ್ಯಾಂಕ್ ಬಿಡುಗಡೆ ಮಾಡಿದ ಹೊಸ ಅಧಿಕೃತ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಲೇಖನ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಲೇಖನಿಷ್ಠವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.

 

 

 

 

 

 

Leave a Comment