Join Whatsapp Group

Join Telegram Group

UIDAI recruitment 2022 – UIDAI ನೇಮಕಾತಿ 2022

UIDAI recruitment 2022 – UIDAI ನೇಮಕಾತಿ 2022

UIDAI recruitment 2022 – UIDAI ನೇಮಕಾತಿ 2022 : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಸಂಸ್ಥೆಯು ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಾರಂಭ ಮಾಡಿದೆ. ಹಲವು ಸಹಾಯಕ ಸೆಕ್ಷನ್ ಆಫೀಸರ್ ಹುದ್ದೆಗಳಿಗೆ ತನ್ನ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಎಲ್ಲಾ ವಿವರಗಳಿಗಾಗಿ ವಯಸ್ಸಿನ ಮಿತಿ ಶೈಕ್ಷಣಿಕ ಅರ್ಹತೆ ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿ ನಮೂನೆ ಆಯ್ಕೆಯ ವಿಧಾನ ಎಲ್ಲಾ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ ಕೊನೆಯವರೆಗೆ ನೋಡಿ. ನೀವೇನಾದರೂ ನಮ್ಮ ವೆಬ್ಸೈಟ್ ಗೆ ಮೊದಲ ಬಾರಿ ಬರುತ್ತಿದ್ದರೆ ನಮ್ಮ ಚಾನೆಲ್ ಅನ್ನು ನೀವು ಫಾಲೋ ಮಾಡಬಹುದು. ಇದರಿಂದ ನೀವು ಪ್ರತಿದಿನ ಮಾಹಿತಿ ಪಡೆಯಬಹುದು.

  1. ಸಂಸ್ಥೆಯ ಹೆಸರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)
  2. ಹುದ್ದೆಗಳ ವಿವರಗಳು : ಸಹಾಯಕ ವಿಭಾಗ ಅಧಿಕಾರಿ ಮತ್ತು ಇತರ ಹುದ್ದೆಗಳು
  3. ಹುಟ್ಟು ಹುದ್ದೆಗಳ ಸಂಖ್ಯೆ : ಒಟ್ಟು ಖಾಲಿ ಹುದ್ದೆಗಳು 20 ಹುದ್ದೆಗಳು
  4. ಉದ್ಯೋಗ ಸ್ಥಳಗಳು : ದೆಹಲಿ, ಭೋಪಾಲ್, ಬೆಂಗಳೂರು ಮತ್ತು ರಾಂಚಿ
  5. ಅರ್ಜಿ ಸಲ್ಲಿಸುವ ವಿಧಾನ : ಆಫ್‌ಲೈನ್ ಮೋಡ್ ಮೂಲಕ
  6. ಅಧಿಕೃತ ವೆಬ್ಸೈಟ್ ಲಿಂಕ್ : UIDAI ಅಧಿಕೃತ ವೆಬ್‌ಸೈಟ್ www.uidai.gov.in

ಖಾಲಿ ಹುದ್ದೆಯ ವಿವರಗಳು: UIDAI recruitment 2022 – UIDAI ನೇಮಕಾತಿ 2022

ಕಾಲಿರುವ ಹುದ್ದೆಗಳ ವಿವರಗಳು ಉಪ ನಿರ್ದೇಶಕರ ಹುದ್ದೆಗಳು ಐದು ಸೆಕ್ಷನ್ ಆಫೀಸರ್ ಹುದ್ದೆಗಳು ಎರಡು ಸಹಾಯಕ ವಿಭಾಗ ಅಧಿಕಾರಿ 13 ಹುದ್ದೆಗಳು ಲೆಕ್ಕಾಧಿಕಾರಿ 3 ಹುದ್ದೆಗಳು ಕಿರಿಯ ಭಾಷಾಂತರ ಅಧಿಕಾರಿ ಒಂದು ಹುದ್ದೆಗಳು ಹಿರಿಯರ ಲೆಕ್ಕಾಧಿಕಾರಿ ಒಂದು ಹುದ್ದೆಗಳು ಸಹಾಯಕ ಖಾತೆ ಅಧಿಕಾರಿ ಒಂದು ಹುದ್ದೆಗಳು.

SSC Recruitment 2022 – ಸ್ಟಾಫ್ ಸೆಲೆಕ್ಷನ್ ಕಮಿಷನ್

ಬೇಕಾಗಿರುವ ಶೈಕ್ಷಣಿಕ ಅರ್ಹತೆ:

ಆಧಾರ್ ಸಂಸ್ಥೆ ಹೊರಡಿಸಿದ ಹೊಸ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ತಮ್ಮ ಪದವಿ ವಿದ್ಯಾಭ್ಯಾಸವನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ವಿದ್ಯಾ ಸಂಸ್ಥೆಯಿಂದ ಪಾಸ್ ಆಗಿರಬೇಕು. ವಿದ್ಯಾಭ್ಯಾಸದ ಹೆಚ್ಚಿನ ವಿವರಗಳನ್ನು ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ. ದಯವಿಟ್ಟು ಕೊನೆಯಲ್ಲಿ ನೀಡಲಾಗಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಶೈಕ್ಷಣಿಕ ಅರ್ಹತೆಯ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದಾಗಿದೆ.

ವಯಸ್ಸಿನ ಮಿತಿ ವಿವರಗಳು :

ಆದರ್ ಸಂಸ್ಥೆ ಹೊರಡಿಸಿದ ಹೊಸ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸಿನ ಮಿತಿಯು 56 ವರ್ಷ ಆಗಿರುತ್ತದೆ. ಇನ್ನು ವಯಸ್ಸಿನ ಮಿತಿಯ ಸಡಿಲಿಕೆ ಮಾಹಿತಿಯನ್ನು ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ. ನೋಟಿಫಿಕೇಶನ್ ಅನ್ನು ಪೂರ್ತಿಯಾಗಿ ಓದಿ.

ವೇತನದ ವಿವರದ ಮಾಹಿತಿಗಳು :

ಆಧಾರ್ ಸಂಸ್ಥೆಯ ನೋಟಿಫಿಕೇಶನ್ ಪ್ರಕಾರ ವಿವಿಧ ಹುದ್ದೆಗಳಿಗೆ ವಿದ ರೀತಿಯ ವೇತನವನ್ನು ನೀಡಲಾಗುತ್ತದೆ. ವೇತನದ ಸಂಪೂರ್ಣ ಮಾಹಿತಿಯನ್ನು ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ. ಪ್ರತಿಯೊಂದು ಹುದ್ದೆಗಳ ವೇತನದ ವಿವರಗಳನ್ನು ಕ್ರಮವಾಗಿ ನೀಡಲಾಗಿದೆ. ಆದ್ದರಿಂದ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ವೇತನದ ಹೆಚ್ಚಿನ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.

ಆಯ್ಕೆ ಪ್ರಕ್ರಿಯೆ: UIDAI recruitment 2022 – UIDAI ನೇಮಕಾತಿ 2022

ಇನ್ನು ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾತನಾಡಿದರೆ ನಿಮ್ಮ ಪ್ರದರ್ಶನದ ಮೇಲೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಮೊದಲಿಗೆ ನಿಮಗೆ ಲಿಖಿತ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನೇರವಾಗಿ ಸಂದರ್ಶನವನ್ನು ನಡೆಸಲಾಗುತ್ತದೆ. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಮಾತ್ರ ಹುದ್ದೆಗಳಿಗೆ ನೇಮಕಾತಿಗೆ ಸೆಲೆಕ್ಟ್ ಮಾಡಲಾಗುತ್ತದೆ. ಆದ್ದರಿಂದ ಸಂದರ್ಶನದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನ ಮಾಡಿ.

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನಗಳ ಮಾಹಿತಿ :

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಕೆಳಗಿನ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಅಂದರೆ ಆಧಾರ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ನಂತರ ನಿಮ್ಮ ಆದರ ಸಂಖ್ಯೆಯನ್ನು ನೀಡಿ ಈ ವೆಬ್ ಸೈಟಿನಲ್ಲಿ ಲಾಗಿನ್ ಆಗಬೇಕು.
  • ನಂತರ ನೀವು ಅಲ್ಲಿ ಅಧಿಸೂಚನೆಯ ಮಾಹಿತಿಯನ್ನು ಕಾಣಬಹುದು ಅಲ್ಲಿ ಕ್ಲಿಕ್ ಮಾಡಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ನೀವು ಈ ಹುದ್ದೆಗಳಿಗೆ ಮಾನದಂಡಗಳನ್ನು ಪೂರೈಸುತ್ತೀರಾ ಎಂದು ಖಚಿತ ಮಾಡಿಕೊಳ್ಳಿ.
  • ನಂತರ ಮುಂದಿನ ಹಂತದಲ್ಲಿ ನಿಗದಿತನ ಮೂಳೆಯ ಫಾರ್ಮೆಟ್ಟಿನಲ್ಲಿ ಅರ್ಜಿ ನಮೂನೆಯನ್ನು ಫಿಲ್ ಮಾಡಿ ಅರ್ಜಿ ನಮೂನೆಯನ್ನು ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಬಹುದು.
  • ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಫೀಲ್ ಮಾಡಿದ ನಂತರ ನೀವು ಅರ್ಜಿ ನಮೂನೆಯನ್ನು ಅಧಿಕೃತ ವಿಳಾಸಕ್ಕೆ ಕಳಿಸಬೇಕಾಗುತ್ತದೆ.

ಪ್ರಮುಖ ಸೂಚನೆ: UIDAI recruitment 2022 – UIDAI ನೇಮಕಾತಿ 2022

  • UIDAI recruitment 2022 ಅಭ್ಯರ್ಥಿಗಳು ಪೋಸ್ಟ್ ಮಾಡುವ ಮುನ್ನ ತಮ್ಮ ಎಲ್ಲಾ ಅಧಿಕೃತ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಸಿವಿ ಪತ್ರವನ್ನು ಮತ್ತು ಐಟಿ ಪುರಾವೆಗಳನ್ನು ಅರ್ಜಿ ನಮೂನೆಯ ಜೊತೆ ಲಗ್ಗತ್ತಿಸಬೇಕು. ಯಾವುದೆಲ್ಲ ದಾಖಲೆಗಳು ಬೇಕೆಂಬುದನ್ನು ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ. ದಯವಿಟ್ಟು ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಓದಿ.
  • ಅಧಿಸೂಚನೆಯಲ್ಲಿ ನೀಡಲಾದ ಮಾಹಿತಿ ಪ್ರಕಾರ ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಅಪೂರ್ಣ ಅರ್ಜಿಗಳು ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಕೊನೆಯ ದಿನಾಂಕದ ಮುಂಚೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೋಟಿಫಿಕೇಶನ್ ಅಲ್ಲಿ ಉದ್ಯೋಗ ಸ್ಥಳದ ಮಾಹಿತಿಯನ್ನು ಸರಿಯಾಗಿ ನೋಡಿ ತಮ್ಮ ಅರ್ಜಿಗಳನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಸುವಾಗ ಅರ್ಜಿ ನಮೂನೆಯಲ್ಲಿ ಸರಿಯಾದ ಮಾಹಿತಿಯನ್ನು ನೀಡಿ ಅರ್ಜಿ ನಮೂನೆಯಲ್ಲಿ ಯಾವುದಾದರೂ ತಪ್ಪು ಕಂಡು ಬಂದಲ್ಲಿ ಅಂತಹ ಅರ್ಜಿಗಳನ್ನು ಅಪೂರ್ಣ ಅರ್ಜಿಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪೋಸ್ಟ್ ಮಾಡುವ ಮುನ್ನ ಅರ್ಜಿ ನಮೂನೆಯನ್ನು ಮತ್ತೊಮ್ಮೆ ಸರಿಯಾಗಿ ನೋಡಿ.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅದಕ್ಕು ಮುನ್ನ ತಮ್ಮ ಅರ್ಜಿ ಸಲ್ಲಿಸಿದರೆ ಉತ್ತಮ ಕೊನೆಯವರೆಗೆ ಕಾಯದೆ ಸರ್ವರ್ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮವಾಗಿರುತ್ತದೆ.

 ವಿಳಾಸ ಮಾಹಿತಿ :

RO ದೆಹಲಿ:

“ನಿರ್ದೇಶಕರು (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಬಾಂಗ್ಲಾ ಸಾಹಿಬ್ ರಸ್ತೆ, ಕಾಳಿ ಮಂದಿರದ ಹಿಂದೆ, ಗೋಲ್ ಮಾರ್ಕೆಟ್, ನವದೆಹಲಿ-I1000.”

RO ಲಖನೌ:

“ನಿರ್ದೇಶಕರು (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಪ್ರಾದೇಶಿಕ ಕಚೇರಿ, 3 ನೇ ಮಹಡಿ, ಉತ್ತರ ಪ್ರದೇಶ ಸಮಾಜ ಕಲ್ಯಾಣ್ ನಿರ್ಮಾಣ್ ನಿಗಮ್ ಕಟ್ಟಡ, TC-46/V, ವಿಭೂತಿ ಖಂಡ್, ಗೋಮತಿ ನಗರ, ಲಕ್ನೋ- 226010.”

 ಪ್ರಮುಖ ದಿನಾಂಕಗಳ ಮಾಹಿತಿ :

ಇನ್ನು ಅರ್ಜಿ ಸಲ್ಲಿಸುವ ದಿನಾಂಕದ ಬಗ್ಗೆ ಮಾಹಿತಿ ನೋಡಿದರೆ, ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ 12 ಸೆಪ್ಟೆಂಬರ್ 2022 ಆಗಿರುತ್ತದೆ ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವು 27 ಅಕ್ಟೋಬರ್ 2022 ಆಗಿರುತ್ತದೆ.

Conclusion :

ನಾವು ಈ ಲೇಖನದಲ್ಲಿ ಆಧಾರ್ ಸಂಸ್ಥೆಯು ಬಿಡುಗಡೆ ಮಾಡಿದ ಹೊಸ notification ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಮತ್ತು ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಭೇಟಿ ಮಾಡಿ ಧನ್ಯವಾದಗಳು.

UIDAI recruitment 2022 ನೋಟಿಫಿಕೇಶನ್ ಮತ್ತು ಅಪ್ಲಿಕೇಶನ್ ಲಿಂಕ್ ಗಳ ಮಾಹಿತಿಗಳು ಕೆಳಗೆ ಇವೆ. ಗಳನ್ನು ಕ್ಲಿಕ್ ಮಾಡಿ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಕೆಳಗೆ ನೀಡಿದ್ದೇವೆ ನೋಡಿ.

Leave a Comment