Join Whatsapp Group

Join Telegram Group

SSC Recruitment 2022 – ಸ್ಟಾಫ್ ಸೆಲೆಕ್ಷನ್ ಕಮಿಷನ್

SSC Recruitment 2022 – ಸ್ಟಾಫ್ ಸೆಲೆಕ್ಷನ್ ಕಮಿಷನ್

SSC Recruitment 2022 – ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸರ್ಕಾರದ ಸಂಸ್ಥೆಯು ಇತ್ತೀಚೆಗೆ ಸ್ಟೈಲು ಗ್ರಾಫ್ ಫಾರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳಿಗೆ ತನ್ನ ಅಧಿಕೃತ ಅಧಿಸೂಚನೆಯನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತಿ ಇರುವ ಅಭ್ಯರ್ಥಿಗಳು ಸಪ್ಟೆಂಬರ್ 9 ರ ಒಳಗೆ ಅಧಿಕ ವೆಬ್ಸೈಟ್ನಲ್ಲಿ ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ. ಬೇಕಾಗಿರುವ ವಿದ್ಯಾಭ್ಯಾಸದ ಮಾಹಿತಿ ವಯಸ್ಸಿನ ಮಿತಿ ಆಯ್ಕೆಯ ಪ್ರಕಾರ ವೇತನದ ವಿವರ ಅರ್ಜಿ ನಮೂನೆ ಎಲ್ಲಾ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಕೊನೆಯವರೆಗೆ ಈ ಲೇಖನವನ್ನು ಓದಿ.

  • ಒಟ್ಟು ಇರುವ ಪೋಸ್ಟುಗಳ ಸಂಖ್ಯೆ 842 ಖಾಲಿ ಪೋಸ್ಟ್ಗಳು
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಐದು ಸೆಪ್ಟೆಂಬರ್ 2022
  • ಪೋಸ್ಟ್ ಹೆಸರು ಸ್ಟೈನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳು
  • ಅಧಿಕೃತ ವೆಬ್ಸೈಟ್ ವಿಳಾಸ : www.ssc.nic.in

SSC ಎಲ್ಲಾ ಖಾಲಿ ಹುದ್ದೆಗಳ ವಿವರಗಳು ಈ ಕೆಳಗೆ ಇವೆ :

  • Stenographer grade c 85
  • Stenographer grade d 757

ಈ ಮೇಲಿನ ಹುದ್ದೆಗಳಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಯ ವಿವರಗಳು :

ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ವಿವರಗಳು ಈ ಕೆಳಗೆ ನೀಡಿದ್ದೇವೆ ನೋಡಿ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಯಾವುದೇ ಮಂಡಳಿಯಿಂದ ಪಿಯುಸಿ ಅನ್ನು ಪೂರ್ಣ ಗೊಳಿಸಿರಬೇಕು. ಪಿಯುಸಿಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಆಯ್ಕೆ ತೆಗೆದು ಕೊಂಡವರು ಕೂಡ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಯಾವುದೇ ವಿಷಯದಲ್ಲಿ ಫೇಲ್ ಆಗಿರ ಬಾರದು. ವಿದ್ಯಾಭ್ಯಾಸದ ಹೆಚ್ಚಿನ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ಪೋಸ್ಟಿನ ಕೊನೆಯಲ್ಲಿ ನೀಡಲಾದ ನೋಟಿಫಿಕೇಶನ್ ಪಿಡಿಎಫ್ ಡೌನ್ಲೋಡ್ ಮಾಡಬಹುದು.

ಸ್ಟಾಪ್ ಸೆಲೆಕ್ಷನ್ ಕಮಿಷನ್ ಹುದ್ದೆಗಳಿಗೆ ಬೇಕಾಗಿರುವ ವಯಸ್ಸಿನ ಮಿತಿಯ ವಿವರಗಳು :

ಸ್ಟೆನೋಗ್ರಾಫರ್ ಗ್ರೇಡ್ ಸಿ : 

ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿಯು 18 ವರ್ಷ ಆಗಿರುತ್ತದೆ ಮತ್ತು ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗಳ ಗರಿಷ್ಠ ವಯಸ್ಸು 30 ವರ್ಷ ಆಗಿರುತ್ತದೆ.

ಸ್ಟೆನೋಗ್ರಾಫರ್ ಗ್ರೇಡ್ ಡಿ :

ಸ್ಟೆನೋಗ್ರಾಫರ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 27 ವರ್ಷ ಆಗಿರಬೇಕು. ವಯಸ್ಸಿನ ಮಿತಿಗಳು ಹೆಚ್ಚಿನ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ಪಿಡಿಎಫ್ ಅನ್ನು ನೋಡಬಹುದು.

ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗಳಿಗೆ ನೀಡಲಾಗುವ ವೇತನಗಳ ವಿವರಗಳು : 

ಸ್ಟಾರ್ ಸೆಲೆಕ್ಷನ್ ಕಮಿಷನ್ ಹುದ್ದೆಗಳಿಗೆ ನೀಡಲಾಗುವ ವೇತನದ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ಆದ್ದರಿಂದ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ವೇತನದ ವಿವರಗಳನ್ನು ನೀವು ಪಡೆಯಬಹುದಾಗಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗಳ ಆಯ್ಕೆ ಪ್ರಕ್ರಿಯೆ ವಿವರಗಳು :

ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳ ಕಿರು ಪಟ್ಟಿಯನ್ನು ಮುಂದಿನ ಹಂತದಲ್ಲಿ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಕೊನೆ ಹಂತದಲ್ಲಿ ಆಯ್ಕೆ ಮಾಡಲಾಗುತ್ತದೆ. ನೆನಪಿಟ್ಟುಕೊಳ್ಳಬೇಕಾದ ಮಾಹಿತಿ ಏನಂದರೆ ಈ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಈ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ನೀವು ಪ್ರಯತ್ನ ಮಾಡಿ.

SSC ಅರ್ಜಿ ಶುಲ್ಕಗಳ ವಿವರಗಳು :

SSC Recruitment 2022 – ಸ್ಟಾಫ್ ಸೆಲೆಕ್ಷನ್ ಕಮಿಷನ್ ಇನ್ನು ಅರ್ಜಿ ಶುಲ್ಕಗಳ ಮಾಹಿತಿಯನ್ನು ನೋಡಿದರೆ ಜನರಲ್ ಓಬಿಸಿ ಅಭ್ಯರ್ಥಿಗಳಿಗೆ ನೂರು ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ. ಇನ್ನು ಎಸ್‌ಸಿ ಎಸ್ಟಿ ಪಿಡಬ್ಲ್ಯೂಡಿ ಮತ್ತು ಇಎಸ್ಎನ್ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಇರುವುದಿಲ್ಲ ಅಭ್ಯರ್ಥಿಗಳು ಉಚಿತವಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದರ ಮಾಹಿತಿಗಳು :

  • ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲನೆಯದಾಗಿ ಕೆಳಗೆ ನೀಡಲಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಎರಡನೆಯದಾಗಿ ಬರುವ ಅಧಿಕೃತ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ವಿವರಗಳನ್ನು ಓದಬೇಕು.
  • ಮುಂದಿನ ಹಂತದಲ್ಲಿ ಕೆಳಗೆ ನೀಡಲಾಗುವ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಎಲ್ಲಾ ಮಾಹಿತಿಗಳನ್ನು ನೀಡಿದ ನಂತರ ಕೊನೆಯ ಹಂತದಲ್ಲಿ ಅರ್ಜಿ ನಮೂನೆಯ ಪ್ರಿಂಟೌಟ ಅನ್ನು ತೆಗೆದುಕೊಳ್ಳಬೇಕು.

 ಅರ್ಜಿ ಸಲ್ಲಿಸುವ ಮುನ್ನ ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ಸೂಚನೆಗಳು : 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಮುಂಚಿತವಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸುವುದು ಉತ್ತಮ. ಕೊನೆಯ ದಿನಾಂಕದಂದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆ ಅಥವಾ ಸರ್ವರ್ error ಮುಂತಾದ ಸಮಸ್ಯೆಗಳನ್ನು ಎದುರಿಸಬಹುದು ಆದ್ದರಿಂದ ಆದಷ್ಟು ಬೇಗ ತಮ್ಮ ಅರ್ಜಿಗಳನ್ನು ಸಲ್ಲಿಸಿ.

RITES Recruitment 2022 – ರೈಲ್ ಇಂಡಿಯಾ ನೇಮಕಾತಿ

ಕೊನೆಯದಾಗಿ ಅಪ್ಲೈ ಮಾಡುವ ಮುನ್ನ ಮತ್ತೊಮ್ಮೆ ತಾವು ನೀಡಲಾದ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸುವುದು ಉತ್ತಮ. ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ಮಾತ್ರ ಕೊನೆಯ ಹಂತದಲ್ಲಿ apply ಮಾಡಿ.

SSC ಪ್ರಮುಖ ದಿನಾಂಕಗಳ ಮಾಹಿತಿಗಳು : 

SSC ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಮುಖ ದಿನಾಂಕಗಳನ್ನು ನೆನಪಿಟ್ಟುಕೊಳ್ಳಬೇಕು. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 20-08-2022. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5 – 9 – 2022 ಆಗಿರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಈ ದಿನಾಂಕದ ಮುನ್ನ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

Conclusion:

ಈ ಲೇಖನದಲ್ಲಿ ನಾವು ಸ್ಟಾಫ್ ಸೆಲೆಕ್ಷನ್ ಕಮಿಷನ್ ಬಿಡುಗಡೆ ಮಾಡಿದ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳ ಅಧಿಕೃತ ಅಧಿಸೂಚನೆಯ ಎಲ್ಲಾ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಪ್ರತಿದಿನ ಎಸ್ ಎಸ್ ಎಲ್ ಸಿ ಪಿ ಯು ಸಿ ಡಿಪ್ಲೋಮೋ ಡಿಗ್ರಿ ಇಂಜಿನಿಯರಿಂಗ್ ಸಂಬಂಧಿಸಿದ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು ಧನ್ಯವಾದಗಳು.

 

Leave a Comment