Repco bank recruitment – ರೆಪ್ಕೋ ಬ್ಯಾಂಕ್ ನೇಮಕಾತಿ
Repco bank recruitment – ರೆಪ್ಕೋ ಬ್ಯಾಂಕ್ ನೇಮಕಾತಿ ನಮಸ್ಕಾರ ಉದ್ಯೋಗ ಗುರು ಜಾಬ್ ಅಪ್ಡೇಟ್ ವೆಬ್ಸೈಟ್ ಗೆ ನಿಮಗೆಲ್ಲರಿಗೂ ಸ್ವಾಗತ. ಇಂದಿನ ಲೇಖನದಲ್ಲಿ ನಾವು ರೆಪ್ಕೋ ಬ್ಯಾಂಕ್ ಬಿಡುಗಡೆ ಮಾಡಿದ ಹೊಸ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತೇವೆ. ರೆಪ್ಕೋ ಬ್ಯಾಂಕ್ ಅಧಿಕಾರಿಗಳು ತಮಿಳುನಾಡು ಪುದುಚೇರಿ ಆಂಧ್ರಪ್ರದೇಶ ಕೇರಳ ಮತ್ತು ಕರ್ನಾಟಕ ಸ್ಥಳಗಳಲ್ಲಿ ಕ್ಲರ್ಕ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸುತ್ತಿದ್ದಾರೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕ್ ಮತ್ತು ನೋಟಿಫಿಕೇಶನ್ ಅನ್ನು ಕೊನೆಯಲ್ಲಿ ನೀಡಿದ್ದೇವೆ. ನೋಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ನವೆಂಬರ್ 2022.
ರೆಪ್ಕೋ ಬ್ಯಾಂಕ್ ಹುದ್ದೆಯ ವಿವರಗಳು :
ವಿವಿಧ ರಾಜ್ಯಗಳಿಗೆ ವಿಧ ರೀತಿಯ ಪೋಸ್ಟುಗಳನ್ನು ನೀಡಲಾಗುವುದು ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ನೋಡಿ. ತಮಿಳುನಾಡು ಮತ್ತು ಪುದುಚೇರಿ ಭಾಗದಲ್ಲಿ 40 ಹುದ್ದೆಗಳಿಗೆ ಅದಿ ಸೂಚನೆಯನ್ನು ಹೊರಡಿಸಿದ್ದಾರೆ. ಆಂಧ್ರ ಪ್ರದೇಶ ರಾಜ್ಯದಲ್ಲಿ ನಾಲ್ಕು ಹುದ್ದೆಗಳಿಗೆ, ಕೇರಳ ರಾಜ್ಯದಲ್ಲಿ ಎರಡು ಹುದ್ದೆಗಳಿಗೆ ಮತ್ತು ಕರ್ನಾಟಕ ರಾಜ್ಯದಲ್ಲಿ ನಾಲ್ಕು ಹುದ್ದೆಗಳಿಗೆ ಒಟ್ಟು 50 ಪೋಸ್ಟ್ ಗಳಿಗೆ ರೆಪ್ಕೋ ಬ್ಯಾಂಕ್ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ. Repco bank recruitment ಹುದ್ದೆಗಳ ಹೆಚ್ಚಿನ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಕೊನೆಯವರೆಗೆ ಓದಿ.
ರೆಪ್ಕೋ ಬ್ಯಾಂಕ್ ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು :
ರೆಪ್ಕೋ ಬ್ಯಾಂಕ್ ಹೊರಡಿಸಿದ ಹೊಸ ಆದಿ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವ ಯಾವುದೇ ಅಧಿಕೃತ ಸರ್ಕಾರ ಮಾನ್ಯತೆ ಪಡೆದ ಮಂಡಳಿಯಿಂದ ಪದವಿ ಶಿಕ್ಷಣವನ್ನು ಪೂರ್ಣ ಗೊಳಿಸಿರಬೇಕು. ಪದವಿ ಪೂರ್ಣ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ಶೈಕ್ಷಣಿಕ ವಿವರಗಳನ್ನು ಸರಿಯಾಗಿ ನೋಟಿಫಿಕೇಶನ್ ಅಲ್ಲಿ ಓದಿ ನೋಟಿಫಿಕೇಶನ್ ಪಿಡಿಎಫ್ ಕೆಳಗೆ ಇದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ವಯಸ್ಸಿನ ಮಿತಿ ವಿವರಗಳು :
Repco bank recruitment ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬ್ಯಾಂಕ್ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ 30-09-2022 ರಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಟ 28 ವರ್ಷ ವಯೋಮಿತಿ ಹೊಂದಿರಬೇಕು. ಈ ವಯಸ್ಸಿನ ಒಳಗೆ ಇರುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ.
ವಯೋಮಿತಿ ಸಡಿಲಿಕೆ ವಿವರಗಳು :
ಬ್ಯಾಂಕ್ ಅಧಿಸೂಚನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಓಬಿಸಿ ಅಭ್ಯರ್ಥಿಗಳಿಗೆ 100 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಗರಿಷ್ಠ ಐದು ವರ್ಷಗಳ ಕಾಲ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ ಮತ್ತು ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸದ್ಯಕೆಯನ್ನು ಅಧಿಕೃತ ಅಧಿಸೂಚನೆಯ ಪ್ರಕಾರ ನೀಡಲಾಗಿದೆ. ವಯೋಮಿತಿ ಸಡಿಲಿಕೆಯ ಸಂಪೂರ್ಣ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ನೋಡಿ.
ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕದ ವಿವರಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ಕೆಟಗರಿಯಲ್ಲಿರುವ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಅರ್ಜಿ ಶುಲ್ಕ ಇರುತ್ತದೆ. ಮೊದಲಿಗೆ ಸಾಮಾನ್ಯ ಮತ್ತು ಉಳಿದ ಎಲ್ಲಾ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 900 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ಅಂದರೆ ಎಸ್ ಟಿ ಎಸ್ ಸಿ ಅಭ್ಯರ್ಥಿಗಳಿಗೆ ಗರಿಷ್ಠ 500 ರೂಪಾಯಿಗಳ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಆಯ್ಕೆಯ ಪ್ರಕ್ರಿಯೆಯ ವಿಧಾನಗಳು :
ಆಯ್ಕೆಯ ಪ್ರಕ್ರಿಯ ವಿಧಾನಗಳನ್ನು ನೋಡಿದರೆ ಮೊದಲಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಇದರ ಮಾಹಿತಿಯನ್ನು ಒದಗಿಸಲಾಗುವುದು. ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳು ಮುಂದಿನ ಹಂತದಲ್ಲಿ ಇಂಟರ್ವ್ಯೂ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಬೇಕಾಗಿದೆ. ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಈ ಮೇಲಿನ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.
Sainik school recruitment – ಸೈನಿಕ್ ಸ್ಕೂಲ್ ನೇಮಕಾತಿ
ರೆಪ್ಕೋ ಬ್ಯಾಂಕ್, ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನಗಳು :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮೊದಲಿಗೆ ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕು. ನಂತರ ವೆಬ್ ಸೈಟಿನ ಹೋಂ ಪೇಜ್ ನಲ್ಲಿ ರೆಪ್ಕೋ ಬ್ಯಾಂಕ್ ನೇಮಕಾತಿಯ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸರಿಯಾಗಿ ಪರಿಶೀಲಿಸಬೇಕು. ನೀವು ಎಲ್ಲಾ ಹುದ್ದೆಗಳಿಗೆ ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಪೂರ್ತಿ ಮಾಡಿ. ನಿಮಗೆ ಇರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಕೊನೆಯ ದಿನಾಂಕದ ಮುಂಚೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನೇಮಕಾತಿಯ ಕೊನೆಯ ಹಂತದಲ್ಲಿ ಪ್ರಿಂಟ್ ಔಟ್ ಅನ್ನು ತೆಗೆದ್ದು ಇಟ್ಟುಕೊಳ್ಳಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :
Repco bank recruitment – ರೆಪ್ಕೋ ಬ್ಯಾಂಕ್ ನೇಮಕಾತಿ ಅರ್ಜಿ ಸಲ್ಲಿಸುವ ಮುನ್ನ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಸು ಪ್ರಾರಂಭ ದಿನಾಂಕವನ್ನು ಸರಿಯಾಗಿ ನೋಡಿ. ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ಆಗುವ ದಿನಾಂಕ 5-11-2022 ಮತ್ತು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ 25 ನವೆಂಬರ್ 2022 ಆಗಿರುತ್ತದೆ. ಈ ದಿನಾಂಕದ ಮುಂಚೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಈ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
Conclusion :
ಈ ಲೇಖನದಲ್ಲಿ ನಾವು ರೆಪ್ಕೋ ಬ್ಯಾಂಕ್ ಹೊರಡಿಸಿದ ಹೊಸ ಆದಿ ಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ನಾವು ನೀಡಿದ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.