Join Whatsapp Group

Join Telegram Group

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ – mudra scheme in Kannada

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ – mudra scheme in Kannada

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ – mudra scheme in Kannada – ಹಲೋ ಗೆಳೆಯರೇ ಈ ಲೇಖನದಲ್ಲಿ ನಾವ ಕನ್ನಡದಲ್ಲಿ ನಾವು ಕೇಂದ್ರ ಸರ್ಕಾರದ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದ ಮುದ್ರ ಯೋಜನೆಯ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಪ್ರಧಾನ ಮಂತ್ರಿಗಳ ಹಲವಾರು ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿದೆ, ಅದರಲ್ಲಿ ಒಂದು ಮುದ್ರಾ ಯೋಜನೆ ಆಗಿರುತ್ತದೆ ಮುದ್ರಾ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಆದರಿಂದ ಲೇಖನವನ್ನು ಕೊನೆಯವರೆಗೆ ಓದಿ.




mudra scheme in Kannada – ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಅವರು 2018 ಎಪ್ರಿಲ್ 8ರಂದು ಪ್ರಾರಂಭ ಮಾಡಿದರು. ಈ ಯೋಜನೆಯ ಪ್ರಮುಖ ಉದ್ದೇಶ ಎಂದರೆ ಭಾರತದಲ್ಲಿ ಸ್ವಯಂ ಉದ್ಯೋಗವನ್ನು ಬಯಸುವ ಜನರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದು ಇದರ ಉದ್ದೇಶವಾಗಿದೆ. ಫೈನಾನ್ಸ್ ಸಚಿವಾಲಯದ ಮಾಹಿತಿಯ ಪ್ರಕಾರ ಈ ಯೋಜನೆ ಅಡಿಯಲ್ಲಿ ಈಗಾಗಲೇ ಸ್ವಯಂ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ 15 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಈಗಾಗಲೇ ನೀಡಲಾಗಿದೆ. ಈ ಮಾಹಿತಿಯನ್ನು ಹಣಕಾಸು ಸಚಿವಾಲಯ ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮುದ್ರಾ ಯೋಜನೆಯಲ್ಲಿ ಮೂರು ವಿಧಗಳಲ್ಲಿ ಸಾಲವನ್ನು ನೀಡಲಾಗುತ್ತದೆ ಅವುಗಳೆಂದರೆ ಶಿಶು ಸಾಲ ಕಿಶೋರ ಸಾಲ ಮತ್ತು ತರುಣ ಸಾಲ ಆಗಿರುತ್ತದೆ.

ಮೊದಲಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಎಂದರೇನು

ಮೊದಲಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಎಂದರೇನು ನೋಡೋಣ ಬನ್ನಿ. mudra scheme in Kannada ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ನಂತರ ಈಗ ಚಾಲ್ತಿಯಲ್ಲಿದೆ. ಸ್ವಯಂ ಉದ್ಯೋಗ ಮಾಡಲು ಬಯಸುವ ಜನರು ತಮ್ಮದೇ ವ್ಯಾಪಾರ ತನ್ನದೇ ಸ್ವಯಂ ಉದ್ಯೋಗವನ್ನು ತೆರೆಯಲು ಅಥವಾ ಶಿಕ್ಷಣಕ್ಕಾಗಿ ಅಥವಾ ಕೃಷಿಗಾಗಿ ಅಥವಾ ವಿವಿಧ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಯುವಕರಿಗೆ ನೀಡುವ ಸಾಲವಾಗಿರುತ್ತದೆ. ಈ ಯೋಜನೆಯ ಈಗಾಗಲೇ ಹಲವಾರು ಯುವಕ ಯುವತಿಯರಿಗೆ ಸಹಾಯವಾಗಿದೆ. ಈ ಯೋಜನೆಯ ಮೂಲಕ ಸ್ವಯಂ ಉದ್ಯೋಗ ಮಾಡಲು ಬಯಸುವ ಯುವಕ ಯುವತಿಯರಿಗೆ ಕೇಂದ್ರ ಸರ್ಕಾರವು ನಿರ್ದಿಷ್ಟ ಸಾಲದ ರೂಪ ಧನವನ್ನು ನೀಡುತ್ತದೆ.




ಸ್ವಯಂ ಉದ್ಯೋಗ ಬಯಸುವ ಅಭ್ಯರ್ಥಿಗಳು ಈ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ಈ ಮುದ್ರಾ ಯೋಜನೆಯ ಸಾಲವನ್ನು ಹೇಗೆ ಪಡೆಯುವುದೆಂಬುದನ್ನು ಲೇಖನದ ಕೆಳಗೆ ನೀಡಿದ್ದೇವೆ ಆದ್ದರಿಂದ ಸಂಪೂರ್ಣವಾಗಿ ಓದಿ. ಈ ಯೋಜನೆ ಪ್ರಾರಂಭ ಮಾಡುವುದರ ಪ್ರಮುಖ ಉದ್ದೇಶವು ನಮ್ಮ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಹಣಕಾಸಿನ ನೆರವನ್ನು ನೀಡುವ ಉದ್ದೇಶ ಆಗಿರುತ್ತದೆ. ಈ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ಉತ್ತೇಜ ನೀಡುವುದು ಮತ್ತು ಒಟ್ಟಾರೆಯಾಗಿ ಭಾರತದ ಆರ್ಥಿಕತೆಯನ್ನು ಸುಧಾರಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯ ( mudra scheme in Kannada ) ಮೂಲಕ ಸ್ವಯಂ ಉದ್ಯೋಗ ಮಾಡುವುದರಿಂದ ಭಾರತದ ಆರ್ಥಿಕತೆಯು ಆರ್ಥಿಕತೆಗೆ ಇದು ಸಹಾಯಕವಾಗಲಿದೆ. ಸ್ವಯಂ ಉದ್ಯೋಗ ಮಾಡಲು ಬಯಸುವ ಯುವಕ ಯುವತಿಯರಿಗೆ ಬಂಡವಾಳದ ಕೊರತೆ ಇರುತ್ತದೆ. ಈ ಕೊರತೆಯನ್ನು ದೂರ ಮಾಡಲು ಕೇಂದ್ರ ಸರ್ಕಾರವು ಸಾಲದ ರೂಪದಲ್ಲಿ ಹಣವನ್ನು ನೀಡುತ್ತದೆ ಸ್ವಯಂ ಉದ್ಯೋಗ ಮಾಡಲು ಬಯಸುವ ಜನರು ಹೊಸ ಭೂಮಿಯನ್ನು ಖರೀದಿ ಮಾಡಲು ಅಥವಾ ಸ್ವಯಂ ಉದ್ಯೋಗಕ್ಕಾಗಿ ಯಂತ್ರವನ್ನು ಖರೀದಿಸಲು ಅಥವಾ ತಮ್ಮ ವ್ಯಾಪಾರವನ್ನು ಹೆಚ್ಚಿಸಲು ಇದು ಸಹಾಯಕವಾಗಲಿದೆ.

ಅರ್ಜಿ ನಮೂನೆಗೆ ಬೇಕಾಗಿರುವಾಗ ಅಗತ್ಯ ದಾಖಲೆಗಳ ವಿವರಗಳು : mudra scheme in Kannada

  • ಮುದ್ರಾ ಯೋಜನೆಯ ಅರ್ಜಿ ಸಲ್ಲಿಸುವ ಬೇಕಾಗಿರುವಾಗತ್ಯ ದಾಖಲೆಗಳ ವಿವರಗಳು ಈ ಕೆಳಗಿನಂತಿವೆ.
  • ವಾಹನ ಸಾಲಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಪ್ರತಿಯನ್ನು ಅನ್ನು ನೀಡಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಾಸ್ಪೋರ್ಟ್ ಗಾತ್ರದ ಫೋಟೋಗಳನ್ನು ಹೊಂದಿರಬೇಕು.
  • ವಿಳಾಸದ ಪುರಾವೆಗಾಗಿ ಮನೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
  • ಮುದ್ರ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಂಕ್ ಖಾತೆಯ ಕೊನೆಯ 6 ತಿಂಗಳ ಸ್ಟೇಟ್ಮೆಂಟ್ ಅನ್ನು ಡೌನ್ಲೋಡ್ ಮಾಡಿಡಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಬಳಿ ಪಾನ್ ಗಾರ್ಡ್ ಹೊಂದಿರಬೇಕು.
  • ಅರ್ಜಿ ಸಲ್ಲಿಸುವವರು ಇನ್ಕಮ್ ಟ್ಯಾಕ್ಸ್ ಮತ್ತು ಸೆಲ್ಫ್ ಟ್ಯಾಕ್ಸ್ ಮಾಹಿತಿಯನ್ನು ಹೊಂದಿರಬೇಕು.




ಕೇಂದ್ರ ಸರ್ಕಾರದ ಮುದ್ರಾ ಯೋಜನೆಯ ಜೊತೆ ಮುಂದಿನ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಪ್ರಧಾನಮಂತ್ರಿ ಗ್ರಾಮೀಣ ಅವಾಸ್ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಇಂತಹ ಹಲವಾರು ಯೋಜನೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತೇವೆ.

ಮುದ್ರಾ ಸಾಲದ ವಿವಿಧ ವಿಧಗಳು

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು mudra scheme in Kannada ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಮೊದಲನೆಯದು ಶಿಶು ಸಾಲವಾಗಿದೆ  ಎರಡನೆಯದು ಕಿಶೋರ ಸಾಲ. ಮೂರನೆಯದು ತರುಣ ಸಾಲ ಆಗಿರುತ್ತದೆ. ಈ ಮೂರು ಸಾಲಗಳ ಸಂಪೂರ್ಣ ಪ್ರಯೋಜನಗಳು ಮತ್ತು ಅರ್ಜಿ ಸಲ್ಲಿಸುವ ಕ್ರಮಗಳ ಬಗ್ಗೆ ಕೆಳಗೆ ನೀಡಿದ್ದೇವೆ ನೋಡಿ.

1. ಶಿಶು ಸಾಲ

ಮುದ್ರಾ ಸಾಲದ ಮೊದಲನೆಯ ಭಾಗ ಶಿಶು ಸಾಲ ಆಗಿರುತ್ತದೆ. ಶಿಶು ಸಾಲದ ಮೂಲಕ ಸಾಲ ಪಡೆಯುವ ಅಭ್ಯರ್ಥಿಗಳಿಗೆ ಗರಿಷ್ಠ 50 ಸಾವಿರದವರೆಗೆ ಕೇಂದ್ರ ಸರ್ಕಾರವು ಸಾಲವನ್ನು ನೀಡುತ್ತದೆ. ಸಾಲ ಪಡೆಯುವ ಅಭ್ಯರ್ಥಿಗಳಿಗೆ ಗರಿಷ್ಠ 10ರಿಂದ 12 ಪರ್ಸೆಂಟ್ ಬಡ್ಡಿದರವನ್ನು ಇರಿಸಲಾಗಿದೆ. ಸ್ವಯಂ ಉದ್ಯೋಗ ಮಾಡಲು ಬಯಸುವ ಪ್ರಾರಂಭ ಹಂತದಲ್ಲಿರುವ ಜನರು ಈ ಸಾಲದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಕಿಶೋರ ಸಾಲ

ಮುದ್ರಾ ಸಾಲದ ಎರಡನೆಯ ಹಂತ ಇದಾಗಿದೆ. ಕಿಶೋರ ಸಾಲದ ಮೂಲಕ ಸಾಲವನ್ನು ಪಡೆಯುವ ಅಭ್ಯರ್ಥಿಗಳಿಗೆ ಗರಿಷ್ಠ 50 ಸಾವಿರದಿಂದ 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ. ಈ ಸಾಲ ಪಡೆಯುವ ಅಭ್ಯರ್ಥಿಗಳಿಗೆ ಗರಿಷ್ಠ 14ರಿಂದ 17% ಬಡ್ಡಿದರವನ್ನು ವಿಧಿಸಲಾಗಿದೆ.

ತರುಣ ಸಾಲ

ತರುಣ ಸಾಲದ ಅಡಿಯಲ್ಲಿ ಸಾಲ ಪಡೆಯುವ ಅಭ್ಯರ್ಥಿಗಳಿಗೆ ಗರಿಷ್ಠ 5 ಲಕ್ಷದಿಂದ 10 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಈ ಹಂತದಲ್ಲಿ ಸಾಲ ಪಡೆಯುವ ಅಭ್ಯರ್ಥಿಗಳ ಸಾಲದ ಮೊತ್ತಕ್ಕೆ ಗರಿಷ್ಠ 16% ಬಡ್ಡಿದರವನ್ನು ಇಡಲಾಗಿದೆ.




ಮುದ್ರಾ ಸಾಲವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು : mudra scheme in Kannada

mudra scheme eligibility :

  • ಮುದ್ರಾ ಸಾಲವನ್ನು ಪಡೆಯಲು ನೀವು ಬಯಸಿದರೆ ಕೆಲವು ಅರ್ಹತೆಗಳು ನಿಮಗೆ ಬೇಕಾಗಿರುತ್ತದೆ. ಇದರ ಬಗ್ಗೆ ಈ ಕೆಳಗೆ ಸಂಕ್ಷಿಪ್ತವಾಗಿ ನೀಡಿದ್ದೇವೆ ನೋಡಿ.
  • ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವರ್ಷ 65 ವರ್ಷ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಂಕ್ ವ್ಯವಹಾರಗಳಲ್ಲಿ ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು ಹೆಚ್ಚು ಸಿವಿಲ್ ಸ್ಕೋರ್ ಹೊಂದಿರುವ ಅಭ್ಯರ್ಥಿಗಳಿಗೆ ಸಾಲ ಪಡೆಯುವ ಅರ್ಹತೆ ಇರುತ್ತದೆ.
  • ಮುದ್ರಾ ಸಾಲವನ್ನು ಸಣ್ಣ ವ್ಯಾಪಾರವನ್ನು ಮಾಡಲು ಬಯಸುವ ಜನರಿಗೆ, ಹಣ್ಣು ತರಕಾರಿ, ಬ್ಯೂಟಿ ಪಾರ್ಲರ್, ಸಣ್ಣ ಮತ್ತು ಗುಡಿ ಕೈಗಾರಿಕೆ, ಸಣ್ಣ ಅಂಗಡಿಗಳು, ಸ್ಟಾರ್ಟ್ ಅಪ್ ಗಳು ಮುಂತಾದ ಕೆಟಗರಿಯಲ್ಲಿ ಸ್ವಯಂ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಈ ಮುದ್ರಾ ಸಾಲವನ್ನು ನೀಡಲಾಗುತ್ತದೆ.
  • ಮುದ್ರಾ ಸಾಲವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಯಾವುದೇ ರೀತಿಯ ಕ್ರಿಮಿನಲ್ ಕೇಸ್ ಅನ್ನು ಹೊಂದಿರಬಾರದು ಮತ್ತು ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು.

mudra scheme in Kannada

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಆನ್ಲೈನ್ ಮೂಲಕ ಸಲ್ಲಿಸುವುದು ಹೇಗೆ

  • ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಅಧಿಕೃತ ವೆಬ್ಸೈಟಿಗೆ ಭೇಟಿ ನೀಡಿದ ನಂತರ ವೆಬ್ಸೈಟ್ನ ಮುಖಪುಟದಲ್ಲಿ ಮುದ್ರಾ ಯೋಜನೆ ಯ ಚಿತ್ರವನ್ನು ಕಾಣಬಹುದು.
  • ಅಲ್ಲಿ ಕ್ಲಿಕ್ ಮಾಡಬೇಕು ನಂತರ ಮುಂದಿನ ಹಂತದಲ್ಲಿ ಮುದ್ರಾ ಯೋಜನೆಯ ಹಲವಾರು ಪ್ರಕಾರಗಳನ್ನು ನೋಡುತ್ತೀರಿ.
  • ಅವುಗಳಲ್ಲಿ ಶಿಶು ಮುದ್ರ ಯೋಜನ ಕಿಶೋರ್ ಮುದ್ರಾ ಯೋಜನಾ ಮತ್ತು ತರುಣ ಮುದ್ರಾ ಯೋಜನೆ ಮೂರು ವಿಧಗಳನ್ನು ಕಾಣಬಹುದು ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಸಾಲದ ಯೋಜನೆಯ ಮೇಲೆ ಕ್ಲಿಕ್ ಮಾಡಬೇಕು.
  • ಕ್ಲಿಕ್ ಮಾಡಿದಾಗ ನಿಮಗೆ ಒಂದು ಅರ್ಜಿ ಸಲ್ಲಿಸುವ ಪುಟ್ಟ ಓಪನ್ ಆಗುತ್ತದೆ. ನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡುವ ಆಯ್ಕೆಯನ್ನು ನೋಡುತ್ತೀರಿ. ಅರ್ಜಿ ನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬೇಕು.
  • ನಂತರ ಮುಂದಿನ ಹಂತದಲ್ಲಿ ಅರ್ಜಿ ನಮೂನೆಯನ್ನು ಯಾವುದೇ ತಪ್ಪುಗಳನ್ನು ಮಾಡದೆ ಅಗತ್ಯ ದಾಖಲೆಗಳೊಂದಿಗೆ ಸರಿಯಾಗಿ ಭರ್ತಿ ಮಾಡಬೇಕು. ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ಅರ್ಜಿ ನಮೂನೆ ಜೊತೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಫಾರ್ಮ್ ಜೊತೆ ಲಗ್ಗತ್ತಿಸಬೇಕು.
  • ಬೇಕಾಗಿರುವ ಅಗತ್ಯ ದಾಖಲೆಗಳ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಕಾಣಬಹುದು. ಅಧಿಕೃತ ಅಧಿಸೂಚನೆಯ ಪಿಡಿಎಫ್ ಡೌನ್ಲೋಡಿಂಗ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಿದ್ದೇವೆ ನೋಡಿ.
  • ಎಲ್ಲಾ ದಾಖಲೆಗಳನ್ನು ಮತ್ತು ಅರ್ಜಿ ನಮೂನೆಯನ್ನು ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಿ ಎಲ್ಲಾ ನೀಡಿರುವ ಮಾಹಿತಿಗಳು ಸರಿಯಾಗಿದೆ ಎಂಬುದನ್ನು ಪರೀಕ್ಷಿಸಬೇಕು.
  • ಎಲ್ಲಾ ದಾಖಲೆಗಳು ಮತ್ತು ನೀಡಿರುವ ಮಾಹಿತಿಗಳು ಸರಿಯಾಗಿದ್ದರೆ ನಂತರ ಅರ್ಜಿ ನಮೂನೆಯನ್ನು ನಿಮ್ಮ ಹತ್ತಿರದ ಬ್ಯಾಂಕ್ ಎಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮೂಲಕ ಸಾಲವನ್ನು ಪಡೆಯಬಹುದು.

ಈ ಮೇಲೆ ನೀಡಿರುವ ಮುದ್ರಾ ಯೋಜನೆ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ರೀತಿಯ ಗೊಂದಲ ಅಥವಾ ಪ್ರಶ್ನೆಗಳಿದ್ದರೆ ನೀವು ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು. ಮತ್ತೊಂದು ಮಾಹಿತಿ ಏನಂದರೆ ನಿಮಗೆ ಸ್ವತಃ ಮೊಬೈಲ್ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಆಗದಿದ್ದರೆ ಅಥವಾ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೆ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಅಥವಾ ಸೈಬರ್ ಸೆಂಟರ್ಗೆ ಹೋಗಿ ಅರ್ಜಿ ನಮೂನೆಯನ್ನು ಸಲ್ಲಿಸಬಹುದು. ಭವಿಷ್ಯತ್ತಿನ ಉಪಯೋಗಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳುವುದು ಉತ್ತಮ ಆಗಿದೆ.

Karnataka Bank recruitment – ಕರ್ನಾಟಕ ಬ್ಯಾಂಕ್ ನೇಮಕಾತಿ

ಮುದ್ರಾ ಸಾಲವನ್ನು ನೀಡುವ ಬ್ಯಾಂಕುಗಳ ವಿವರಗಳು ಈ ಕೆಳಗಿನಂತಿವೆ – mudra scheme in Kannada

  • ಅಲಹಾಬಾದ್ ಬ್ಯಾಂಕ್ ಆಫ್ ಇಂಡಿಯಾ
  • ಕಾರ್ಪೊರೇಷನ್ ಬ್ಯಾಂಕ್
  • ಪಂಜಾಬ್ ಬ್ಯಾಂಕ್
  • ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್
  • ಐಸಿಸಿಐ
  • ಬ್ಯಾಂಕ್ ಆಫ್ ಮಹಾರಾಷ್ಟ್ರ
  • ಆಂಧ್ರ ಬ್ಯಾಂಕ್
  • ಸಿಂಡಿಕೇಟ್ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಕರ್ನಾಟಕ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ದೀನಾ ಬ್ಯಾಂಕ್
  • ಐಡಿಬಿಐ ಬ್ಯಾಂಕ್
  • ಕೆನರಾ ಬ್ಯಾಂಕ್
  • ಇಂಡಿಯನ್ ಬ್ಯಾಂಕ್ ಫೆಡರಲ್ ಬ್ಯಾಂಕ್
  • ಆಕ್ಸಿಸ್ ಬ್ಯಾಂಕ್ ಕೋಟಕ್
  • ಮಹೀಂದ್ರಾ ಬ್ಯಾಂಕ್
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಬ್ಯಾಂಕ್ ಆಫ್ ಬರೋಡ
  • ಇಂಡಿಯನ್ ಓವರ್ಸೀಸ್ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಚ್ ಡಿ ಎಫ್ ಸಿ ಬ್ಯಾಂಕ್
  • ಸರಸ್ವತ್ ಬ್ಯಾಂಕ್

Conclusion

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ – mudra scheme in Kannada – ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದ ಮುದ್ರಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಲೇಖನದಲ್ಲಿ ಮುದ್ರಾ ಯೋಜನೆಯ ಮೂಲಕ ಹೇಗೆ ಸಾಲವನ್ನು ಪಡೆಯಬಹುದು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಪ್ರತಿದಿನ ಸರ್ಕಾರಿ ಸ್ಕೀಮ್ ಗಳ ಬಗ್ಗೆ ಮಾಹಿತಿ ಪಡೆಯಲು ಬಯಸುವವರು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು ಧನ್ಯವಾದಗಳು.

 

Leave a Comment