India post recruitment – ಇಂಡಿಯಾ ಪೋಸ್ಟ್ ನೇಮಕಾತಿ
India post recruitment – ಇಂಡಿಯಾ ಪೋಸ್ಟ್ ನೇಮಕಾತಿ ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಭಾರತದ ವಿವಿಧ ಸ್ಥಳಗಳಲ್ಲಿ ನೇಮಕಾತಿಯನ್ನು ಮಾಡಲು ತನ್ನ ಅಧಿಕೃತ ಸೂಚನೆಯನ್ನು ಪ್ರಕಟ ಮಾಡಿದೆ. ಭಾರತದ ತಮಿಳುನಾಡು ಪ್ರದೇಶದಲ್ಲಿ ಹಲವುದ್ದೆಗಳಿಗೆ ನೇಮಕಾತಿಯನ್ನು ಆರಂಭ ಮಾಡಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಂಚೆ ಇಲಾಖೆ ಕುಶಲಕರ್ಮಿ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಲೇಖನದಲ್ಲಿ ನಾವು ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ.
ಇಂಡಿಯ ಪೋಸ್ಟ್ ನೇಮಕಾತಿಯ ಹುದ್ದೆಗಳ ವಿವರಗಳು
ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಸೂಚನೆಯ ಪ್ರಕಾರ ಒಟ್ಟು ಏಳು ನುರಿತ ಕುಶಲಕರ್ಮಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ನೇಮಕಾತಿಯ ಹುದ್ದೆಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಕೃತ ಸೂಚನೆಯನ್ನು ಪರಿಶೀಲಿಸಬಹುದು. ಅಧಿಕೃತ ಅಧಿ ಸೂಚನೆಯನ್ನು ಈ ಲೇಖನದಲ್ಲಿ ನೀಡಿದ್ದೇವೆ.
ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಯ ಮಾಹಿತಿಗಳು : India post recruitment – ಇಂಡಿಯಾ ಪೋಸ್ಟ್ ನೇಮಕಾತಿ
ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಇತ್ತೀಚಿನ ಹೊಸ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಶೈಕ್ಷಣಿಕ ಅರ್ಹತೆಯ ಅಗತ್ಯ ಇರುತ್ತದೆ. ಅಭ್ಯರ್ಥಿಗಳು ಈ ಶೈಕ್ಷಣಿಕ ಅರ್ಹತೆ ಅನ್ನು ಪೂರೈಸಿದರೆ ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಎಂಟನೇ ತರಗತಿ ಪಾಸ್ ಆಗಿರಬೇಕು. ಎಂಟನೇ ತರಗತಿ ಪಾಸಾದ ಅಭ್ಯರ್ಥಿಗಳು ಅಂಚೆ ಇಲಾಖೆಯ ಹೊಸ ನೇಮಕಾತಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಗಮನಿಸಿ ಎಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಸುವವರು ಈ ಮೇಲೆ ನೀಡಿರುವ ಶೈಕ್ಷಣಿಕ ಅರ್ಹತೆಯನ್ನು ಪೂರೈಸಿರಬೇಕು. ಶೈಕ್ಷಣಿಕ ಅರ್ಹತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಅಧಿಕೃತ ನೋಟಿಫಿಕೇಶನ್ ಅನ್ನು ಪರಿಶೀಲಿಸಬಹುದು.
ನೇಮಕಾತಿಗೆ ಬೇಕಾಗಿರುವ ವಯಸ್ಸಿನ ಮಿತಿಯ ಮಾಹಿತಿಗಳು
ಸಂಸ್ಥೆಯು ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯ ಪ್ರಕಾರ ಅಂಚೆ ಇಲಾಖೆಯ ಹಲವು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ರೀತಿಯ ವಯಸ್ಸಿನ ಮಿತಿಯ ಅಗತ್ಯ ಇರುತ್ತದೆ. ಸಂಸ್ಥೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ ಆಗಿರುತ್ತದೆ. 18 ವರ್ಷದಿಂದ 30 ವರ್ಷದ ಒಳಗೆ ಇರುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಹೊಸ ನೇಮಕಾತಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರತಿಯೊಬ್ಬರು ಅರ್ಜಿ ಸಲ್ಲಿಕೆಯ ಮೊದಲು ವಯಸ್ಸಿನ ಮಿತಿಯನ್ನು ಅಧಿಕೃತ ಸೂಚನೆಯಲ್ಲಿ ಸರಿಯಾಗಿ ನೋಡಿ ನಂತರವೇ ನಮ್ಮ ಅರ್ಜಿಗಳನ್ನು ಸಲ್ಲಿಸುವುದು ಉತ್ತಮ.
ಅಂಚೆ ಇಲಾಖೆ ನೇಮಕಾತಿಯ ವೇತನದ ವಿವರಗಳು
ಸಂಸ್ಥೆಯ ಅಧಿಕೃತ ಅಧಿಸೂಚನೆಯ ಪ್ರಕಾರ ವಿವಿಧ ಹುದ್ದೆಗಳಿಗೆ ವಿವಿಧ ರೀತಿಯ ವೇತನವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಮಾಡಿ ನೇಮಕಾತಿಗೆ ಆಯ್ಕೆಯಾದರೆ ಅಭ್ಯರ್ಥಿಗಳ ಕನಿಷ್ಠ ವೇತನ 19,000 ಆಗಿರುತ್ತದೆ ಮತ್ತು ಗರಿಷ್ಠ ವೇತನ 63000 ಆಗಿರುತ್ತದೆ. ನಿಮಗೆ ನೀಡುವ ವೇತನವನ್ನು ಸಂಸ್ಥೆಯು ನಿಮ್ಮ ಸಂದರ್ಶನದಲ್ಲಿ ನಿಮ್ಮ ಪ್ರದರ್ಶನದ ಮೇಲೆ ಆಯ್ಕೆ ಮಾಡಲಾಗುತ್ತದೆ. ನೀವು ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ನಿಮಗೆ ವೇತನವು ಒಳ್ಳೆಯದು ಸಿಗುತ್ತದೆ. ಆದ್ದರಿಂದ ನೇರ ಸಂದರ್ಶನದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ.
Jilla panchayat recruitment – ಶಿವಮೊಗ್ಗ ಜಿಲ್ಲಾ ಪಂಚಾಯತ್ ನೇಮಕಾತಿ
ನೇಮಕಾತಿಯ ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :
ಅಂಚೆ ಇಲಾಖೆಯ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಹಿತಿಗಳು ಈ ಕೆಳಗಿನಂತಿವೆ. ಈ ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳಿಗೆ ಮೊದಲಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂಸ್ಥೆಯ ಅಧಿಕೃತ ಅಧಿಸೂಚನೆಯ ಪ್ರಕಾರ ನೇಮಕಾತಿ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಬಗ್ಗೆ ನಿಮಗೆ ಯಾವುದೇ ಗೊಂದಲ ಇದ್ದರೆ ಅಧಿಕೃತ ಅಧಿಸೂಚನೆಯನ್ನು ನೋಡಬಹುದು. ಅಧಿಕೃತ ಅಧಿಸೂಚನೆಯನ್ನು ಈ ಲೇಖನದ ಕೊನೆಯಲ್ಲಿ ನೀಡಿದ್ದೇವೆ ನೋಡಿ.
ನೇಮಕಾತಿಯ ಅರ್ಜಿ ಶುಲ್ಕದ ವಿವರಗಳು
India post recruitment ಅರ್ಜಿ ಸಲ್ಲಿಸಲು ಬಯಸುವ ವಿವಿಧ ವರ್ಗದ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಇದರ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ ನೋಡಿ. ಮೊದಲಿಗೆ ಎಸ್ಸಿ ಎಸ್ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ವಿಧಿಸಿಲ್ಲ. ಈ ಅಭ್ಯರ್ಥಿಗಳು ಉಚಿತವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಉಳಿದೆಲ್ಲಾ ಅಭ್ಯರ್ಥಿಗಳಿಗೆ ನೂರು ರೂಪಾಯಿ ಆಗಿರುತ್ತದೆ. ಮತ್ತು ಪರೀಕ್ಷಾ ಶುಲ್ಕವು ಎಲ್ಲಾ ಅಭ್ಯರ್ಥಿಗಳಿಗೆ ರೂ.400 ಆಗಿರುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲೆ ನೀಡಿರುವ ಪಾವತಿ ಮಾಡಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕ್ರಮಗಳು
ಈ ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ನಂತರ ಅಧಿಕೃತ ಅಧಿಸೂಚನೆಯನ್ನು ನೋಡಿ ನೀವು ಆ ಹುದ್ದೆಗಳಿಗೆ ಸೂಕ್ತ ಇದ್ದೀರಾ ಎಂಬುದನ್ನು ಮಾನದಂಡಗಳನ್ನು ನೋಡಬೇಕು.
ನೀವು ಸೂಕ್ತ ಇದ್ದರೆ ಮುಂದಿನ ಹಂತದಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಪ್ರಾರಂಭ ಮಾಡಬೇಕು. ಅರ್ಜಿ ನಮೂನೆಯನ್ನು ಈ ಲೇಖನದ ಕೊನೆಯಲ್ಲಿ ನೀಡಿದ್ದೇವೆ. ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮುನ್ನ ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸರಿಯಾಗಿ ನೋಡಿ ನಂತರ ತಮ್ಮ ಅರ್ಜಿಗಳನ್ನು ಭರ್ತಿ ಮಾಡಿ. ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ಈ ಕೆಳಗೆ ನೀಡಿರುವ ವಿಳಾಸಕ್ಕೆ ತಮ್ಮ ಅರ್ಜಿ ನಮೂನೆಯನ್ನು ಮತ್ತು ಅಗತ್ಯ ದಾಖಲೆಗಳನ್ನು ಪೋಸ್ಟ್ ಮೂಲಕ ಕಳುಹಿಸಿ.
ಅರ್ಜಿ ಸಲ್ಲಿಸಬೇಕಾದ ವಿಳಾಸ ಡಿ ಸೀನಿಯರ್ ಮ್ಯಾನೇಜರ್ ಮೇಲ್ ಮೋಟರ್ ಸರ್ವಿಸ್ ಗ್ರೀನ್ ರಸ್ತೆ ಚೆನ್ನೈ ಈ ವಿಳಾಸಕ್ಕೆ ಅರ್ಜಿ ನಮೂನೆ ಕಳುಹಿಸಬೇಕು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿಗಳು
ಭಾರತೀಯ ಜನತೆಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಡಿಸೆಂಬರ್ 8 ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜನವರಿ 9 ಆಗಿರುತ್ತದೆ. ಈ ದಿನಾಂಕದ ಮುನ್ನ ಪ್ರತಿಯೊಬ್ಬರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
Conclusion :
ಈ ಲೇಖನದಲ್ಲಿ ನಾವು ಭಾರತೀಯ ಅಂಚೆ ಇಲಾಖೆಯು ಬಿಡುಗಡೆ ಮಾಡಿದ ಹೊಸ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.