Join Whatsapp Group

Join Telegram Group

DHFWS recruitment 2022 – ಆರೋಗ್ಯ ಇಲಾಖೆ ನೇಮಕಾತಿ

DHFWS recruitment 2022 – ಆರೋಗ್ಯ ಇಲಾಖೆ ನೇಮಕಾತಿ 

DHFWS recruitment 2022 – ಆರೋಗ್ಯ ಇಲಾಖೆ ನೇಮಕಾತಿ  ಇಂದಿನ ಲೇಖನದಲ್ಲಿ ನಾವು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟ ಮಾಡಿದ ಹೊಸ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಲವು ಹುದ್ದೆಗಳಿಗೆ ನೇಮಕಾತಿಯನ್ನು ಪ್ರಾರಂಭ ಮಾಡಿದ್ದಾರೆ. ಕರ್ನಾಟಕದ ವಿವಿಧ ಸ್ಥಳಗಳಲ್ಲಿ ದಾದಿಯರ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಾರಂಭಿಸಲಾಗುವುದು.

ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ 17 ನವೆಂಬರ್ ನವೆಂಬರ್ 2022 ಆಗಿರುತ್ತದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ದಿನಾಂಕದ ಮುನ್ನ ತಮ್ಮ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ವಯಸ್ಸಿನ ಮಿತಿ ಬೇಕಾಗಿರುವ ಶೈಕ್ಷಣಿಕ ಹಾರೈತೆ ಮಾಹಿತಿ ಅರ್ಜಿ ಶುಲ್ಕ ಮಾಹಿತಿ ಪ್ರಕ್ರಿಯೆಯ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ ಆದ್ದರಿಂದ ಕೊನೆಯವರೆಗೆ ಓದಿ.

ಹುದ್ದೆಗಳ ವಿವರಗಳು : 

DHFWS recruitment 2022 – ಆರೋಗ್ಯ ಇಲಾಖೆ ನೇಮಕಾತಿ ಹೊಸ ಅಧಿಸೂಚನೆಯ ಪ್ರಕಾರ ಖಾಲಿ ಇರುವ ಹುದ್ದೆಗಳ ವಿವರಗಳು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಒಟ್ಟು 17 ಹುದ್ದೆಗಳು ದಾದಿಯರು ಒಟ್ಟು 82 ಹುದ್ದೆಗಳು, ಆಶಾ ಮೇಲ್ವಿಚಾರಕರು ಒಟ್ಟು ಐದು ಹುದ್ದೆಗಳು, ಆಯುಷ್ಯ ಅಧಿಕಾರಿ ಹುದ್ದೆಗಳು ಒಟ್ಟು ಮೂರು ಹುದ್ದೆಗಳು, ಡಯಟ್ ಕೌನ್ಸಿಲರ್ ಒಂದು ಹುದ್ದೆಗಳು, ಸಿವಿಲ್ ಇಂಜಿನಿಯರ್ ಒಂದು ಹುದ್ದೆಗಳು, ಬಯೋಮೆಡಿಕಲ್ ಇಂಜಿನಿಯರ್ ಒಂದು ಹುದ್ದೆಗಳು, ಪುರುಷ ಆರೋಗ್ಯ ಕಾರ್ಯಕರ್ತ ಒಂದು ಹುದ್ದೆಗಳು, ದಂತ ತಂತ್ರಜ್ಞ ಹುದ್ದೆಗಳು ಒಂದು, ಶ್ರವಣ ದೋಷ ಮಕ್ಕಳಿಗೆ ಬೋಧಕ ಹುದ್ದೆಗಳು ಒಂದು ಹುದ್ದೆಗಳು ಆಗಿರುತ್ತದೆ.

HAL recruitment 2022 – HAL ನೇಮಕಾತಿ 2022

ಹುದ್ದೆಗಳಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಯ ಮಾಹಿತಿಗಳು :

ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಹೊರಡಿಸಿದ ಹೊಸ ಆಧಿ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಯಾವುದೇ ಸರ್ಕಾರಿ ಮಾನ್ಯತೆ ಪಡೆದ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಅಥವಾ ಡಿಪ್ಲೋಮಾ ಅಥವಾ ಬಿ ಎಸ್ ಸಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಈ ಮೇಲಿನ ಶೈಕ್ಷಣಿಕ ಅರ್ಹತೆಯನ್ನು ಇರುವವರು ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಶೈಕ್ಷಣಿಕ ಮಾಹಿತಿಯ ಹೆಚ್ಚಿನ ವಿವರಗಳನ್ನು ಬಯಸುವ ಅಭ್ಯರ್ಥಿಗಳು ಪೋಸ್ಟ್ ಕೊನೆಯಲ್ಲಿ ನೀಡಲಾದ ನೋಟಿಫಿಕೇಶನ್ ಅಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಬೇಕಾಗಿರುವ ಅನುಭವದ ವಿವರಗಳು :

ಆಶಾ ಮೇಲ್ವಿಚಾರಕರು – ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎರಡು ವರ್ಷದಿಂದ ಮೂರು ವರ್ಷಗಳ ತರಬೇತಿ ಅನುಭವವನ್ನು ಹೊಂದಿರಬೇಕಾಗುತ್ತದೆ.

ಬಯೋಮೆಡಿಕಲ್ ಇಂಜಿನಿಯರ್ ಮತ್ತು ಸಿವಿಲ್ ಇಂಜಿನಿಯರ್ – ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎರಡು ವರ್ಷ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.

ನೇಮಕಾತಿಗೆ ಬೇಕಾಗಿರುವ ಅರ್ಜಿ ಶುಲ್ಕದ ವಿವರಗಳು :

ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದ ಹೊಸದಿ ಸೂಚನೆಯ ಪ್ರಕಾರ ಈ ಮೇಲೆ ನೀಡಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಆಸಕ್ತಿ ಇರುವವರು ಉಚಿತವಾಗಿ ತಮ್ಮ ಅರ್ಜಿಗಳನ್ನು ಅಗತ್ಯ ಮಾಹಿತಿಗಳೊಂದಿಗೆ ಸಲ್ಲಿಸಬಹುದಾಗಿದೆ.

ನೇಮಕಾತಿಯ ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :

ಆರೋಗ್ಯ ಇಲಾಖೆ ಹೊರಡಿಸಿದವದ ಹೊಸ ಅಧಿಸೂಚನೆಯ ಪ್ರಕಾರ ಆಸಕ್ತಿ ಇರುವವರು ಮೊದಲಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳಿಗೆ ಮೊದಲನೇ ಹಂತವನ್ನು ನೀಡಲಾಗುವುದು. ಮೊದಲನೇ ಹಂತದಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಈ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ಮಾಡಿದ ವ್ಯಕ್ತಿಗಳನ್ನು ಎರಡನೇ ಹಂತಕ್ಕೆ ತೇರ್ಗಡೆ ಮಾಡಲಾಗುವುದು. ನಂತರ ಎರಡೇ ಹಂತ ನಡೆಯುತ್ತದೆ ಎರಡನೇ ಹಂತದಲ್ಲಿ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ಮಾಡಲಾಗುತ್ತದೆ. ನೇರ ಸಂದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೊಸ ಅಧಿಸೂಚನೆಯ ಪ್ರಕಾರ ಮೇಲಿನ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ.

ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಮಾಡಲಾಗುವುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆದ್ದರಿಂದ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನವನ್ನು ಮಾಡಿ ಆಯ್ಕೆ ಪ್ರಕ್ರಿಯೆ ಹೆಚ್ಚಿನ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ನೋಟಿಫಿಕೇಶನ್ ಅಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನೋಟಿಫಿಕೇಶನ್ ಡೌನ್ಲೋಡ್ ಮಾಡುವ ಲಿಂಕ್ ಅನ್ನು ಕೆಳಗೆ ನೀಡಿದ್ದೇವೆ ನೋಡಿ. ನೋಟಿಫಿಕೇಶನ್ ಅನ್ನು ಪೂರ್ತಿಯಾಗಿ ಪ್ರಾರಂಭದಿಂದ ಕೊನೆಯವರೆಗೆ ಓದಿ.

ಆರೋಗ್ಯ ಇಲಾಖೆಯ ಹೊಸದಿ ಸೂಚನೆಗೆ ಅರ್ಜಿ ಸಲ್ಲಿಸುವ ಕ್ರಮಗಳು :

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಆರೋಗ್ಯ ಇಲಾಖೆಯ ಹೊಸ ಅಧಿಸೂಚನೆಯನ್ನು ನೋಡಬಹುದು. ಅಧಿಕೃತ ವೆಬ್ಸೈಟ್ನಲ್ಲಿ ಆರೋಗ್ಯ ಸುರಕ್ಷತಾ ಅಧಿಕಾರಿ ಮತ್ತು ಹಲವು ಹುದ್ದೆಗಳಿಗೆ ಇರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬಹುದು.

DHFWS recruitment 2022 – ಆರೋಗ್ಯ ಇಲಾಖೆ ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಸರಿಯಾಗಿ ಪರಿಶೀಲಿಸಬೇಕು ಮತ್ತು ಯಾವುದೇ ತಪ್ಪುಗಳನ್ನು ಮಾಡಲಿ ಅರ್ಜಿ ನಮೂನೆಯನ್ನು ಸರಿಯಾಗಿ ಬರುತ್ತಿ ಮಾಡಬೇಕು. ಅಗತ್ಯ ಇದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ. ತಮ್ಮ ಎಲ್ಲಾ ಅಧಿಕೃತ ದಾಖಲೆಗಳನ್ನು ಈ ಕೆಳಗೆ ನೀಡಲಾದ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಕಳುಹಿಸಿಕೊಡಬೇಕು ಮತ್ತು ಭವಿಷ್ಯತ್ತಿನ ಉಪಯೋಗಕ್ಕೆ ಅರ್ಜಿ ನಮೂನೆಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು

ವಿಳಾಸದ ಮಾಹಿತಿಗಳು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಜಿಲ್ಲಾ ಯೋಜನೆ ನಿರ್ವಹಣಾ ಘಟಕ ರಾಷ್ಟ್ರೀಯ ಆರೋಗ್ಯ ಅಭಿಯಾನ ಬಿ ಬ್ಲಾಕ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅಧಿಕಾರಿಗಳ ಕಚೇರಿ ಆವರಣ ಜಿಲ್ಲಾ ಆಡಳಿತ ಭವನ ದೇವಗಿರಿ ಹಾವೇರಿ ಈ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ಮಾಹಿತಿಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ಆಗುವ ದಿನಾಂಕ  7 ನವೆಂಬರ್ 2022 ಮತ್ತು ಅರ್ಜಿ ಸಲ್ಲಿಕೆ ದಿನಾಂಕ 17 ನವೆಂಬರ್ 2022 ಆಗಿರುತ್ತದೆ.

CONCLUSION : DHFWS recruitment 2022 – ಆರೋಗ್ಯ ಇಲಾಖೆ ನೇಮಕಾತಿ

ಈ ಲೇಖನದಲ್ಲಿ ನಾವು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೊಸ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಭೇಟಿ ನೀಡಿ ಧನ್ಯವಾದಗಳು.

 

Leave a Comment