Atal pension scheme in Kannada – ಅಟಲ್ ಪಿಂಚಣಿ ಯೋಜನೆ
Atal pension scheme in Kannada – ಅಟಲ್ ಪಿಂಚಣಿ ಯೋಜನೆ : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈಗಾಗಲೇ ಹಲವು ಮಂದಿ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಹುಡುಕುತ್ತಿದ್ದಾರೆ. ಆದ್ದರಿಂದ ಇಂದಿನ ಲೇಖನದಲ್ಲಿ ಇದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಅಟಲ್ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2018 ಜೂನ್ 1 ರಂದು ಆರಂಭ ಮಾಡಿದರು. ಈ ಯೋಜನೆಯನ್ನು ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜಾರಿ ಮಾಡಿದರು.
ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ವಿವರಗಳು
ಕನ್ನಡದಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಜೂನ್ ಒಂದೆರಡು ಸಾವಿರದ ಹದಿನೈದರಿಂದ ಪ್ರಾರಂಭ ಮಾಡಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶ ಅಸಂಘಟಿತ ವಲಯದ ಜನರಿಗೆ ಪಿಂಚಣಿಯನ್ನು ನೀಡುವುದು ಆಗಿತ್ತು. ಅವರು ಕನಿಷ್ಠ ತಿಂಗಳಲ್ಲಿ ಇದರಲ್ಲಿ ಭಾಗವಹಿಸುವುದರಿಂದ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಿಂದ ಈಗಾಗಲೇ ಭಾರತದ ಹಲವಾರು ಮಂದಿಗೆ ಪ್ರಯೋಜನವಾಗಿದೆ. ಆದರೆ ಹೆಚ್ಚಿನ ಮಂದಿಗೆ ಈ ಯೋಜನೆ ಲಾಭ ಮತ್ತು ಇದನ್ನು ಹೇಗೆ ಸಲ್ಲಿಸುವುದು ಎಂಬುದು ತಿಳಿದಿಲ್ಲ ಇದರ ಬಗ್ಗೆ ನೋಡೋಣ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು
ಅಟಲ್ ಪಿಂಚಣಿ ಯೋಜನೆಗೆ ಈಗಾಗಲೇ ಯಾವುದೇ ಪಿಂಚಣಿಗಳ ಪ್ರಯೋಜನವನ್ನು ಪಡೆಯದೇ ಇರುವ ಖಾಸಗಿ ವಲಯಗಳು ಅಥವಾ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಸಂಬಂಧಿಸಿ ದ ಜನರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವವರ ವಯಸ್ಸು 60 ವರ್ಷ ತುಂಬಿರಬೇಕು. 60 ವರ್ಷ ತುಂಬಿದ್ದ ನಂತರ ಇರುವವರು ಇದರ ಲಾಭವನ್ನು ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ಈ ಪಿಂಚಣಿ ಯೋಜನೆಯಲಿರುವವರು ಶಾಶ್ವತವಾಗಿ ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಅಥವಾ 5000 ದವರೆಗೆ ಶಾಶ್ವತ ಪಿಂಚಣಿಯನ್ನು ಪಡೆಯಬಹುದು.
Atal pension scheme in Kannada : ಈ ಪಿಂಚನಿಂದ ಪಡೆಯುವ ಹಣವನ್ನು ಹೇಗೆ ನಿರ್ಧಾರ ಮಾಡಲಾಗುತ್ತದೆ ಎಂಬುವುದರ ಪ್ರಶ್ನೆ. ಈ ಪಿಂಚಣಿಯಿಂದ ನೀಡುವ ಹಣವು ಠೇವಣಿ ಮಾಡುವ ಕೊಡುಗೆ ಮೊತ್ತದ ಮೇಲೆ ನಿರ್ಧಾರ ಆಗಿರುತ್ತದೆ. ಒಂದು ವೇಳೆ ಪಿಂಚಣಿ ಪಡೆಯುವ ಫಲಾನುಭವಿ ಮರಣ ಹೊಂದಿದರೆ ಅವರ ಸಂಗಾತಿ ಕೂಡ ಇದರ ಲಾಭವನ್ನು ಪಡೆಯಬಹುದು. ನಂತರ ಸಂಗಾತಿ ಕೂಡ ಮರಣ ಹೊಂದಿದ್ದರೆ ಈ ಪಿಂಚಣಿಯ ಹಣವನ್ನು ಯಾರು ನಾಮಿನಿಯಲ್ಲಿದ್ದಾರೋ ಅವರಿಗೆ ನೀಡಲಾಗುತ್ತದೆ.
ಅಟಲ್ ಪಿಂಚಣಿ ಯೋಜನೆಯ ಅರ್ಹತೆಯ ಮಾನದಂಡಗಳು
- ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವುದು ಭಾರತದ ನಾಗರಿಕರಗಾಗಿ ಆದ್ದರಿಂದ ಈ ಯೋಜನೆಯ ಲಾಭವನ್ನು ಪಡೆಯುವವರು ಭಾರತದ ನಾಗರಿಕರಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ವರ್ಷದಿಂದ 40 ವರ್ಷದೊಳಗಿರಬೇಕು.
- ಈ ವಯಸ್ಸಿನ ಮಿತಿಯಲ್ಲಿರುವ ಜನರು ಅಟಲ್ ಪಿಂಚಣಿ ಯೋಜನೆ ಯೋಜನೆಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
- ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ 20 ವರ್ಷದವರೆಗೆ ತಮ್ಮ ಕೊಡುಗೆಗಳನ್ನು ನೀಡಬೇಕಾಗುತ್ತದೆ.
- 20 ವರ್ಷದವರೆಗೆ ಕೊಡುಗೆಯನ್ನು ನೀಡಿದರೆ ಮಾತ್ರ ಇದರ ಲಾಭವನ್ನು ಪಡೆಯಬಹುದಾಗಿದೆ.
- ಯೋಜನೆಗೆ ಅರ್ಜಿ ಸಲ್ಲಿಸುವವರು ಯಾವುದೇ ಶಾಸನಬದ್ಧ ಮತ್ತು ಸಾಮಾಜಿಕ ಭದ್ರತಾ ಯೋಜನೆಯಾ ಸದಸ್ಯರಾಗಿರಬಾರದು, ಉಳಿದ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಯೋಜನೆಗೆ ಸಲ್ಲಿಸಬಹುದು.
ಅಟಲ್ ಪಿಂಚಣಿ ಯೋಜನೆಯ ಪ್ರಮುಖ ಮಾಹಿತಿಗಳು : Atal pension scheme in Kannada
- ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಒಂದು ವೇಳೆ ಆರು ತಿಂಗಳವರೆಗೆ ನಿರಂತರವಾಗಿ ಯಾವುದೇ ಠೇವಣಿ ಮೊತ್ತವನ್ನು ನೀಡದಿದ್ದರೆ ಅವರ ಖಾತೆಗಳನ್ನು ಸೀಲ್ ಮಾಡಲಾಗುತ್ತದೆ.
- ಒಂದು ವೇಳೆ ಸತ್ತು ಹನ್ನೆರಡು ತಿಂಗಳ ವರೆಗೆ ಯಾವುದೇ ಮುತ್ತದ ಠೇವಣಿಯನ್ನು ನೀಡದಿದ್ದರೆ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಒಂದು ವೇಳೆ 24 ತಿಂಗಳವರೆಗೆ ಯಾವುದೇ ಠೇವಣಿಯನ್ನು ನೀಡದಿದ್ದರೆ ಅವರ ಖಾತೆಗಳನ್ನು ಶಾಶ್ವತವಾಗಿ ಸಂಪೂರ್ಣವಾಗಿ ಮುಚ್ಚಲಾಗುತ್ತದೆ.
- ಆದರಿಂದ ಈ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳುವುದು ಉತ್ತಮ. ಈ ಯೋಜನೆಗೆ ಒಂದು ಬಾರಿ ಸೇರಿದ ನಂತರ ಈ ಯೋಜನೆಯಿಂದ ನಿರ್ಗಮನ ಮಾಡಲು ಸಾಧ್ಯವಿರುವುದಿಲ್ಲ.
- ನಿಮಗೆ 60 ವರ್ಷ ತುಂಬುವವರೆಗೆ ಈ ಯೋಜನೆಗೆ ಠೇವಣಿಯನ್ನು ನೀಡುತ್ತಲೇ ಇರಬೇಕು ಆಗ ಮಾತ್ರ ಇದರ ಲಾಭವನ್ನು ಪಡೆಯಬಹುದು.
ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಮಗಳು : Atal pension scheme in Kannada
- ನೀವು ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ಈ ಲೇಖನದ ಕೊನೆಯಲ್ಲಿ ನಾವು ಅರ್ಜಿ ನಮೂನೆಯ ಪಿಡಿಎಫ್ ಲಿಂಕನ್ನು ಕೊಟ್ಟಿದ್ದೇವೆ.
- ಅಲ್ಲಿ ಹೋಗಿ ಅಟಲ್ ಪಿಂಚಣಿ ಯೋಜನೆಯ ಅರ್ಜಿ ನಮೂನೆ ಡೌನ್ಲೋಡ್ ಮಾಡಿ. ವೆಬ್ ಸೈಟ್ ಲಿಂಕನ್ನು ಕೆಳಗೆ ನೀಡಿದ್ದೇವೆ ಅಟಲ್ ಪಿಂಚಣಿ ಅರ್ಜಿ ನಮೂನೆಯ ಎಲ್ಲಾ ಭಾಷೆಗಳಲ್ಲಿಯೂ ಲಭ್ಯವಿದೆ.
- ನಿಮಗೆ ಯಾವ ಭಾಷೆಯಲ್ಲಿ ಬೇಕು ಆ ಭಾಷೆಯಲ್ಲಿ ಡೌನ್ಲೋಡ್ ಮಾಡಬಹುದು. ಇದು ಬಹುತೇಕ ಭಾರತದಲ್ಲಿ ಭಾಷೆಯಲ್ಲಿಯೂ ಇದೆ ಇದು ಕನ್ನಡ ಮಾತ್ರವಲ್ಲದೆ ಇಂಗ್ಲಿಷ್ ಹಿಂದಿ ಬಾಂಗ್ಲಾ ಮುಂತಾದ ಭಾರತದ ಹಲವು ಭಾಷೆಗಳಲ್ಲಿ ಲಭ್ಯವಿದೆ.
- ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬೇಕು.
- ನಂತರ ಮುಂದಿನ ಹಂತದಲ್ಲಿ ಅರ್ಜಿ ನಮೂನೆಯನ್ನು ಯಾವುದೇ ತಪ್ಪುಗಳನ್ನು ಮಾಡದೇ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ನಿಮ್ಮ ಹತ್ತಿರದ ಬ್ಯಾಂಕ್ ಖಾತೆಗೆ ಹೋಗಿ ಸಲ್ಲಿಸಬೇಕು.
- ಅರ್ಜಿ ನಮೂನೆಯಲ್ಲಿ ನೀಡಿರುವ ಮಾಹಿತಿಗಳು ಸರಿಯಾಗಿ ಇದೆ ಎಂಬುದನ್ನು ಖಚಿತ ಮಾಡಿ ನಂತರವೇ ತಮ್ಮ ಅರ್ಜಿಯನ್ನು ಸಲ್ಲಿಸಿ. ಅರ್ಜಿ ನಮೂನೆಯಲ್ಲಿ ನಿಮ್ಮ ಖಾತೆ ಸಂಖ್ಯೆ ನಿಮ್ಮ ಸಂಗಾತಿಯ ಹೆಸರು ಮತ್ತು ನಾಮಿನಿ ಮತ್ತು ವಿಳಾಸಗಳ ಮಾಹಿತಿಗಳನ್ನು ನೀಡಬೇಕಾಗುತ್ತದೆ.
- ಸರಿಯಾದ ಮಾಹಿತಿಯನ್ನು ಅರ್ಜಿ ನಮೂನೆಯಲ್ಲಿ ನೀಡಿದ ನಂತರ ನಿಮ್ಮ ಅರ್ಜಿಯನ್ನು ಬ್ಯಾಂಕಿಗೆ ಸಲ್ಲಿಸಿ.
atal pension yojana in kannada : ಪ್ರತಿ ತಿಂಗಳೂ ನೀವು ನೀಡುವ ಠೇವಣಿಯ ಮೊತ್ತವನ್ನು ಮುಂಚಿತವಾಗಿಯೇ ನೋಡಿ ಖಚಿತ ಮಾಡಿಕೊಳ್ಳಿ. ನೀವು ಮಾಸಿಕವಾಗಿ ಎಷ್ಟು ಹಣವನ್ನು ಠೇವಣಿ ಮಾಡಬಹುದೆಂಬುದನ್ನು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದು. ನೀವು ಮೊದಲಿಗೆ ಒಂದು ಠೇವಣಿಯ ಮೊತ್ತವನ್ನು ನೀಡುವುದಾಗಿ ನಿರ್ಧಾರ ಮಾಡಿ ನಂತರ ಠೇವಣಿಯನ್ನು ಪಾವತಿ ಮಾಡಲು ಸಾಧ್ಯವಾಗದಿದ್ದರೆ ನೀವು ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ.
Pradhan Mantri Fasal Bima Yojana in Kannada – ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ
ದಂಡಗಳ ವಿವರಗಳು ಈ ಕೆಳಗೆ ಇವೆ
Atal pension scheme in Kannada : ಮಾಸಿಕ ಕೊಡುಗೆ 100 ರೂಪಾಯಿ ಇರುವವರಿಗೆ ಒಂದು ರೂಪಾಯಿಗಳ ದಂಡವನ್ನು ಇರಿಸಲಾಗುತ್ತದೆ. ನೂರು ರೂಪಾಯಿ ಇಂದ 500 ರೂಪಾಯಿಗಳ ಠೇವಣಿ ಹೊಂದಿರುವ ಅಭ್ಯರ್ಥಿಗಳಿಗೆ ಎರಡು ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ಇನ್ನು 500 ರೂಪಾಯಿಯಿಂದ ಒಂದು ಸಾವಿರದವರೆಗೆ ಮಾಸಿಕ ಕೊಡುಗೆ ಇರುವ ಅಭ್ಯರ್ಥಿಗಳಿಗೆ ಐದು ರೂಪಾಯಿಗಳ ತಂಡವನ್ನು ವಿಧಿಸಲಾಗುತ್ತದೆ. ರೂ.1000 ದಿಂದ ಹೆಚ್ಚಿನ ಮಾಸಿಕ ಠೇವಣಿಯನ್ನು ಹೊಂದಿರುವ ಅಭ್ಯರ್ಥಿಗಳು ಹತ್ತು ರೂಪಾಯಿಯ ದಂಡಗಳನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದಯ ಸರಿಯಾಗಿ ಗಮನಿಸಿ ತಮ್ಮ ಠೇವಣಿಗಳನ್ನು ನಿರ್ಧಾರ ಮಾಡುವುದು ಉತ್ತಮವಾಗಿದೆ. ಇನ್ನೊಂದು ಮುಖ್ಯವಾದ ಮಾಹಿತಿ ಏನೆಂದರೆ ಈಗಾಗಲೇ ಸರ್ಕಾರದಿಂದ ಬೇರೆ ಯೋಜನೆಯಲ್ಲಿ ಲಾಭ ಪಡೆಯುತ್ತಿರುವ ಸರ್ಕಾರಿ ನೌಕರರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
ಅಟಲ್ ಪಿಂಚಣಿ ಯೋಜನೆಯಿಂದ ನೀವು ಯಾವಾಗ ಹಣವನ್ನು ಪಡೆಯಬಹುದು
ಅಟಲ್ ಪಿಂಚಣಿ ಯೋಜನೆ ಸೇರಿದ ನಂತರ ನೀವು ಹಣವನ್ನು ಪಡೆಯಲು ಬಯಸಿದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಮಾರ್ಗವನ್ನು ಪಾಲಿಸಿದರೆ ಯಾವುದೇ ನಷ್ಟವನ್ನು ಅನುಭವಿಸದೆ ಹಣವನ್ನು ಪಡೆಯಬಹುದಾಗಿದೆ. ಮೊದಲಿಗೆ ನಿಮಗೆ 60 ವರ್ಷ ತುಂಬಿದ್ದರೆ ನಂತರ ನೀವು ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ ನೀವು ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಇನ್ನು ಯೋಚನೆಯಲ್ಲಿರುವವರು ಮರಣ ಹೊಂದಿದ್ದರೆ ಈ ಯೋಜನೆಯ ಲಾಭವನ್ನು ಅವರ ಹೆಂಡತಿ, ಪಡೆಯಬಹುದಾಗಿದೆ. ಒಂದು ವೇಳೆ ಪಾಲಿಸಿದರ ಮತ್ತು ಅವರ ಹೆಂಡತಿ ಇಬ್ಬರೂ ಮರಣ ಹೊಂದಿದರೆ ಈ ಯೋಜನೆಯ ಮೊತ್ತವನ್ನು ನಾಮಿನಿಯಲ್ಲಿರುವ ವ್ಯಕ್ತಿಗೆ ನೀಡಲಾಗುತ್ತದೆ. Atal pension scheme in Kannada – ನಾಮಿನಿಗೆ ಎಷ್ಟು ಹಣವನ್ನು ಹಿಂತಿರುಗಿಸಲಾಗುತ್ತದೆ ಎಂಬುದನ್ನು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಹೋಗಿ ನೋಡಬಹುದು.
ಒಂದು ವೇಳೆ ಈ ಯೋಜನೆಯಲ್ಲಿರುವವರು 60 ವರ್ಷ ತುಂಬ ಮೊದಲೇ ತಮ್ಮ ಹಣವನ್ನು ಹಿಂಪಡೆಯಲು ಬಯಸಿದರೆ ಕೆಲವು ಶುಲ್ಕವನ್ನು ವಿಧಿಸಲಾಗುತ್ತದೆ. ಕೆಲವು ಶುಲ್ಕಗಳನ್ನು ಕಡಿತ ಮಾಡಿ ಉಳಿದ ಮೊತ್ತವನ್ನು ಅಭ್ಯರ್ಥಿಗೆ ನೀಡಲಾಗುತ್ತದೆ. ಒಂದು ವೇಳೆ ಈ ಪಾಲಿಸಿ ಅಲ್ಲಿರುವವರು 60 ವರ್ಷ ತುಂಬದೇ ಮರಣ ಹೊಂದಿದರೆ ಅವರ ಸಂಗಾತಿ ಇವರ 60 ವರ್ಷ ತಲುಪುವವರೆಗೆ ಠೇವಣಿಯನ್ನು ಪಾವತಿ ಮಾಡಿ ನಂತರ ಇದರ ಲಾಭವನ್ನು ಸಂಗಾತಿದಾರಳು ಹೊಡೆಯಬಹುದಾಗಿದೆ. ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸುವ ಪ್ರತಿಯೊಬ್ಬರು ಅಟಲ್ ಪಿಂಚಣಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.
Conclusion :
Atal pension scheme in Kannada – ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಅಟಲ್ ಪಿಂಚಣಿ ಯೋಜನೆ ಯ ಲಾಭಗಳು ಅದರ ಉದ್ದೇಶ ನಿಯಮಗಳು ಅರ್ಜಿ ಸಲ್ಲಿಸುವ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಇದೇ ರೀತಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಬಯಸುವವರು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು ಧನ್ಯವಾದಗಳು.