Join Whatsapp Group

Join Telegram Group

EPFO recruitment 2022 – ಉದ್ಯೋಗಿಗಳ ಭವಿಷ್ಯ ನಿಧಿ

EPFO recruitment 2022 – ಉದ್ಯೋಗಿಗಳ ಭವಿಷ್ಯ ನಿಧಿ

EPFO recruitment 2022 – ಉದ್ಯೋಗಿಗಳ ಭವಿಷ್ಯ ನಿಧಿ ನಮಸ್ಕಾರ ಗೆಳೆಯರೇ ಉದ್ಯೋಗ ಗುರು ವೆಬ್ಸೈಟ್ ಗೆ ಸ್ವಾಗತ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಹೊಸ ಸಾಧಿಸಿ ಉಚ್ಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸಪ್ಟೆಂಬರ್ 27-2022 ರ ಮೊದಲು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು ವಯಸ್ಸಿನ ಮಿತಿ ವೇತನ ವಿವರಗಳು ಆಯ್ಕೆಯ ಪ್ರಕಾರಗಳು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ನೀಡಿದ್ದೇವೆ ಆದ್ದರಿಂದ ಪೋಸ್ಟ್ ಅನ್ನು ಕೊನೆಯವರೆಗೆ ಓದಿ.

  • ಒಟ್ಟು ಪೋಸ್ಟುಗಳ ಸಂಖ್ಯೆ : 32 ಪೋಸ್ಟುಗಳು ಖಾಲಿ ಇವೆ
  • ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ : 27 ಸೆಪ್ಟೆಂಬರ್ ಆಗಿರುತ್ತದೆ
  • ಉದ್ಯೋಗ ಸ್ಥಳ : ಅಭ್ಯರ್ಥಿಗಳನ್ನು ಭಾರತಾದ್ಯಂತ ನೇಮಕಾತಿ ಮಾಡಲಾಗುತ್ತದೆ 
  • ಪೋಸ್ಟ್ ಹೆಸರು : ಆಡಿಟರ್ ಹುದ್ದೆ

ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆ ವಿವರಗಳು :

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಹೊಸ ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಯಿಂದ ತಮ್ಮ ಪದವಿಯನ್ನು ಮುಗಿಸಿರಬೇಕು. ಈ ವಿದ್ಯಾಭ್ಯಾಸ ಮುಗಿಸಿದವರು ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ವಿದ್ಯಾಭ್ಯಾಸದ ವಿವರಗಳನ್ನು ಸರಿಯಾಗಿ ನೋಡಿ. ಪದವಿಯಲ್ಲಿ ಯಾವುದೇ ಆಯ್ಕೆಯನ್ನು ಮಾಡಿದವರು ಕೂಡ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಪದವಿಯಲ್ಲಿ ಎಲ್ಲಾ ವಿಷಯದಲ್ಲಿಯೂ ಉತ್ತೀರ್ಣ ಆಗಿರಬೇಕು ಉತ್ತೀರ್ಣ ಆಗದೆ ಇರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಆಯ್ಕೆ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗಿರುವ ವಯಸ್ಸಿನ ಮಿತಿಗಳು :

ಉದ್ಯೋಗಿಗಳ ಭವಿಷ್ಯ ನಿಂತಿ ಅತಿ ಸೂಚನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರುವ ವಯಸ್ಸಿನ ಮಿತಿ ಗರಿಷ್ಠ ವಯಸ್ಸು 56 ವರ್ಷಗಳು ಆಗಿರುತ್ತದೆ. 56 ವರ್ಷ ಒಳಗೆ ಇರುವವರು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. 50 ವರ್ಷ ಮೀರಿದವರಿಗೆ ಅರ್ಜಿ ಸಲ್ಲಿಸಲು ಅರ್ಹಾಗಿರುವುದಿಲ್ಲ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಯಸ್ಸಿನ ಮಿತಿಯನ್ನು ಸರಿಯಾಗಿ ನೋಡಿ ತಮ್ಮ ಅರ್ಜಿಗಳನ್ನು ಸಲ್ಲಿಸಿ. ವಯಸ್ಸಿನ ಮಿತಿ ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಪಿಡಿಎಫ್ ಅನ್ನು ನೋಡಿ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ನೀಡುವ ವೇತನದ ವಿವರಗಳು :

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಿವಿಧ ರೀತಿಯಲ್ಲಿ ವೇತನವನ್ನು ನೀಡಲಾಗುತ್ತದೆ. ಇನ್ನು ವೇತನದ ವಿವರ ನೋಡಿದರೆ ರೂ. 9300 ರೂಪಾಯಿ ಯಿಂದ 34,800 ವರೆಗೆ ವೇತನವನ್ನು ನೀಡಲಾಗುತ್ತದೆ. ನೀವು ಸಂದರ್ಶನದಲ್ಲಿ ಭಾಗವಹಿಸಿದ ರೀತಿ ನೋಡಿ ನಿಮ್ಮ ವೇತನವನ್ನು ನೀಡಲಾಗುತ್ತದೆ. ವೇತನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ಪೋಸ್ಟ್ ಕೊನೆಯಲ್ಲಿ ನೋಟಿಫಿಕೇಶನ್ ಪಿಡಿಎಫ್ ನೀಡಿದ್ದೇವೆ. ಅದನ್ನು ಡೌನ್ಲೋಡ್ ಮಾಡಿ ವೇತನದ ಹೆಚ್ಚಿನ ವಿವರಗಳನ್ನು ನೀವು ಅಲ್ಲಿ ಓದಬಹುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವಿಧಾನ : EPFO recruitment 2022

ಉದ್ಯೋಗಿಗಳ ಭವಿಷ್ಯ ನಿಧಿ ಅಧಿಸೂಚನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲಿಗೆ ಸಂದರ್ಶನವನ್ನು ನಡೆಸಲಾಗುತ್ತದೆ ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಭ್ಯರ್ಥಿಗಳನ್ನು ಈ ಮೇಲಿನ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಭಾಗಿಯಾದ ಎಲ್ಲರನ್ನು ಆಯ್ಕೆ ಮಾಡಲಾಗುವುದಿಲ್ಲ. ಉತ್ತಮ ಪ್ರದರ್ಶನ ನೀಡಿದ 32 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆದರಿಂದ ಆದಷ್ಟು ಸಂದರ್ಶನದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನಿಸಿ.

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನಗಳು : 

EPFO recruitment 2022 – ಉದ್ಯೋಗಿಗಳ ಭವಿಷ್ಯ ನಿಧಿ ಉದ್ಯೋಗಿಗಳ ಭವಿಷ್ಯ ನಿಂತಿ ಅಧಿಸೂಚನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ನೀಡಿದ್ದೇವೆ ನೋಡಿ. ಅಭ್ಯರ್ಥಿಗಳು ತಮ್ಮ ಸ್ವಂತ ಹಿತಾಸಕ್ತಿಯಿಂದ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಗೊತ್ತಿಲ್ಲದ ಅಭ್ಯರ್ಥಿಗಳು ಸೈಬರ್ ಸೆಂಟರ್ ಗಳಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

  • ಮೊದಲಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಉದ್ಯೋಗಿಗಳ ಭವಿಷ್ಯ ನಿಧಿ ಅಧಿಕೃತ ವೆಬ್ಸೈಟಿಗೆ ಭೇಟಿ ನೀಡಬೇಕು. ಅಧಿಕೃತ ವೆಬ್ಸೈಟ್ ಲಿಂಕನ್ನು ಪೋಸ್ಟ್ ಕೊನೆಯಲ್ಲಿ ನೀಡಿದ್ದೇವೆ ಗಮನದಲ್ಲಿ ನೋಡಿ.
  • ಉದ್ಯೋಗಿಗಳ ಭವಿಷ್ಯ ನಿಂತಿ ವೆಬ್ಸೈಟಿನ ಹೋಂ ಪೇಜ್ ನಲ್ಲಿ ನೀವು ಅಧಿಕೃತ ಅಧಿಸೂಚನೆಯ ಮಾಹಿತಿಯನ್ನು ಕಾಣಬಹುದು ಅಲ್ಲಿ ಕ್ಲಿಕ್ ಮಾಡಿ. ಅದರಿಂದ ನೋಟಿಫಿಕೇಶನ್ ಮತ್ತು ಅಧಿಕೃತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ.
  • ನಂತರ ಯಾವುದೇ ತಪ್ಪುಗಳಿಲ್ಲದೆ ಸರಿಯಾಗಿ ಅರ್ಜಿ ನಮೂನೆಯನ್ನು ಪೂರ್ತಿಯಾಗಿ ಫಿಲ್ ಮಾಡಿ.
  • ಮುಂದಿನ ಹಂತದಲ್ಲಿ ನೋಟಿಫಿಕೇಶನ್ ಅಲ್ಲಿ ನೀಡಿದ ಮಾಹಿತಿಯಂತೆ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಫೋಟೋ ಕಾಪಿಯನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. ನೀವು ಕಳಿಸಬೇಕಾದ ವಿಳಾಸದ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ನೋಡಿ.

ಉದ್ಯೋಗ ಸ್ಥಳಗಳು : EPFO recruitment 2022 – ಉದ್ಯೋಗಿಗಳ ಭವಿಷ್ಯ ನಿಧಿ

ಇಪಿಎಫ್ಓ ಅಧಿಕೃತ ಅಧಿಸೂಚನೆಯ ಪ್ರಕಾರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತಾದ್ಯಂತ ನೇಮಕ ಮಾಡಲಾಗುತ್ತದೆ. ನಿಗದಿಯಾಗಿ ಯಾವ ರಾಜ್ಯದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಅದಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಲಾಗಿಲ್ಲ.

ಉದ್ಯೋಗಿಗಳ ಭವಿಷ್ಯ ನಿಧಿ ಅರ್ಜಿ ಸಲ್ಲಿಸುವ ವಿಳಾಸ ಕೆಳಗೆ ನೀಡಿದ್ದೇವೆ ನೋಡಿ : EPFO recruitment 2022

ಶ್ರೀ ಮೋಹಿತ್ ಶೇಖರ್ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಭವಿಷ್ಯ ನಿಧಿ ಭವನ 14 ನವದೆಹಲಿ ಒಂದು ಒಂದು ಸೊನ್ನೆ ಸೊನ್ನೆ ಆರು ಆರು ಈ ವಿಳಾಸಕ್ಕೆ ಎಲ್ಲಾ ಅಧಿಕೃತ ದಾಖಲೆಗಳೊಂದಿಗೆ ಕೊನೆ ದಿನಾಂಕದ ಮುನ್ನ ಉತ್ತಮ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಸೂಚನೆಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಪ್ರಮಾಣ ಪತ್ರಗಳನ್ನು ಇರಬೇಕು ಇದರ ಜೊತೆ ನೀವು ನಿಮ್ಮ ಲೇಟೆಸ್ಟ್ ರೆಸುಮ್ ಮತ್ತು ಅಗತ್ಯ ಐಡಿ ಪುರಾವೆಗಳ ಫೋಟೋ ಕಾಫಿಗಳನ್ನು ಇದರ ಜೊತೆ ಇರಬೇಕು. ಕೊನೆ ದಿನಾಂಕದ ನಂತರ ಸ್ವೀಕರಿಸುವ ಎಲ್ಲಾ ಅರ್ಜಿ ನಮೂನೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲನೆಯದಾಗಿ ಪೂರ್ತಿಯಾಗಿ ನೋಟಿಫಿಕೇಶನ್ ಅಲ್ಲಿ ನೀಡಿದ ಮಾಹಿತಿಗಳನ್ನು ಕೊನೆಯವರೆಗೆ ಓದಿ. ಅಂತರ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಾಗಿರುತ್ತದೆ.

SBI Life Recruitment 2022

ಉದ್ಯೋಗಿಗಳ ಭವಿಷ್ಯ ನಿಧಿ ಅರ್ಜಿ ನಮೂನೆಯ ಪ್ರಮುಖ ದಿನಾಂಕಗಳು :

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇರುವ ಪ್ರಾರಂಭ ದಿನಾಂಕ 12/8/2022. ಮತ್ತು ವರ್ಜಿಸಲ್ಲಿಸಲು ಇರುವ ಕೊನೆಯ ದಿನಾಂಕ 27/9/ 2022. ಇಲ್ಲಿ ಇಲ್ಲಿ ನೀಡಲಾದ ದಿನಾಂಕದ ವರೆಗೆ ನೀವು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

Conclusion :

ಈ ಲೇಖನದಲ್ಲಿ ನಾವು ಸರ್ಕಾರಿ ಸಂಸ್ಥೆ ಆಗಿರುವ ಉದ್ಯೋಗ ಭವಿಷ್ಯ ನಿಧಿ EPFO recruitment 2022 ಹೊರಡಿಸಿದ ಹೊಸ ಅಧಿ ಸೂಚನೆಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.

 

Leave a Comment