Join Whatsapp Group

Join Telegram Group

KSP ನೇಮಕಾತಿ 2026: 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ – PUC ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) ವತಿಯಿಂದ 2026ನೇ ಸಾಲಿನ ಭರ್ಜರಿ ನೇಮಕಾತಿ ಪ್ರಕಟಣೆ ಪಬ್ಲಿಶ್ ಆಗಿರುತ್ತದೆ ಆಸಕ್ತ ರು ಅರ್ಜಿ ಸಲ್ಲಿಸಬಹುದು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ 10ನೇ ತರಗತಿ, PUC ಹಾಗೂ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ಆಗಿರುತ್ತದೆ.

ಹುದ್ದೆಗಳ ಸಂಖ್ಯೆ ಮತ್ತು ವೇತನ : 

ಈ ನೇಮಕಾತಿಯಡಿಯಲ್ಲಿ ಕಲ್ಯಾಣ ಕರ್ನಾಟಕ (KK) ಪ್ರದೇಶಕ್ಕೆ 596 ಹುದ್ದೆಗಳು ಹಾಗೂ ಉಳಿದ ಕರ್ನಾಟಕ (RPC) ಪ್ರದೇಶಕ್ಕೆ 3395 ಹುದ್ದೆಗಳು ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹37,500 ರಿಂದ ₹76,100 ವರೆಗೆ ವೇತನ ಇರುತ್ತದೆ ಎಂದು ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ. ಕರ್ನಾಟಕದ ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯಸ್ಸಿನ ಮಿತಿ ಮತ್ತು ಸರ್ಕಾರಿ ಅರ್ಜಿ ಶುಲ್ಕ ಮಾಹಿತಿ :

ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 33 ವರ್ಷ ಆಗಿರಬೇಕು ಮತ್ತು  2A, 2B, 3A, 3B ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 2 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಿದ್ದಾರೆ ಆ ಕೇಟಗರಿ ಅಭ್ಯರ್ಥಿಗಳು ಲಾಭವನ್ನು ಪಡೆಯಬಹುದು ಆಗಿದೆ. ಅರ್ಜಿ ಶುಲ್ಕ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹750 ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ₹500 ಸರ್ಕಾರಿ ಅರ್ಜಿ ಶುಲ್ಕ ಇರುತ್ತದೆ.

ಆನ್‌ಲೈನ್ ಅರ್ಜಿ ಪ್ರಕ್ರಿಯೆ 08 ಜೂನ್ 2026ರಿಂದ ಆರಂಭವಾಗಿದ್ದು, 03 ಜುಲೈ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು 04 ಜುಲೈ 2026 ಕೊನೆಯ ದಿನ ಆಗಿರುತ್ತೆ ಆದಷ್ಟು ಬೇಗ ನಿಮ್ಮ ಅರ್ಜಿಯನ್ನು ಸಲ್ಲಿಸಿ ಕೊನೆಯ ದಿನದ ವರೆಗೆ ಕಾದರೆ ಸರ್ವರ್ ಸಮಸ್ಯೆಗಳನ್ನು ನೋಡಬಹುದು ಆಗಿದೆ. ಅಧಿಕೃತ ನೋಟಿಫಿಕೇಶನ್ PDF ಕೊನೆಯಲ್ಲಿ ಇದೆ ನೋಡಿ.

ಅರ್ಜಿ ಸಲ್ಲಿಸಲು ಸಹಾಯ ಬೇಕೇ?

ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ನಮ್ಮ ಸೈಬರ್ ಸೆಂಟರ್ ಅನ್ನು ಸಂಪರ್ಕಿಸಿ. ಅಗತ್ಯ ದಾಖಲೆಗಳನ್ನು WhatsApp ಮೂಲಕ ಕಳುಹಿಸಿದರೆ ಅರ್ಜಿ ಸಲ್ಲಿಸಿ ನೀಡಲಾಗುತ್ತದೆ. ಡಾಕ್ಯುಮೆಂಟ್ಸ್ ಅನ್ನು ವಾಟ್ಸಪ್ಪ್ ಅಲ್ಲಿ ಕಳುಹಿಸಿ.

📞 ಸೈಬರ್ ವಾಟ್ಸಾಪ್ ಸಂಖ್ಯೆ: 6360791580

Notification PDF

Leave a Comment